ರಾಯಚೂರು: ಮುಡಾ ಪ್ರಕರಣದಲ್ಲಿ (MUDA Case) ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ನೀಡಿದ್ದ ತೀರ್ಪನ್ನು `ಪೊಲಿಟಿಕಲ್ ಜಡ್ಜ್‌ಮೆಂಟ್’ ಎಂದಿದ್ದ ಸಚಿವ ಜಮೀರ್ ಅಹ್ಮದ್ (Zameer Ahmed Khan) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಜಮೀರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಚನ್ನಪಟ್ಟಣದ (Channapatna) ಯಾರಬ್‌ನಗರದಲ್ಲಿ ಮತಪ್ರಚಾರದ ವೇಳೆ ಮಹಿಳೆಯೊಬ್ಬರಿಗೆ 500 ರೂ. ಮುಖಬೆಲೆಯ ನೋಟುಗಳನ್ನು ಜಮೀರ್ ನೀಡಿದ್ದರು. ಮತಪ್ರಚಾರದ ವೇಳೆ ಹಣ ಹಂಚಿಕೆ ಆರೋಪದಡಿ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರೇಮಿ ಮದುವೆಗೆ ನಿರಾಕರಿಸಿದ ಆರೋಪ- ಯುವತಿ ಆತ್ಮಹತ್ಯೆಗೆ ಶರಣು
Advertisement
Advertisement
ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಹಾಗೂ `ಪಬ್ಲಿಕ್ ಟಿವಿ’ ವರದಿ ಉಲ್ಲೇಖಿಸಿ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ. ಈ ಕುರಿತು ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ
Advertisement
ಪ್ರಕರಣ ಏನು?
ಯಾರಬ್‌ನಗರದಲ್ಲಿ ಪ್ರಚಾರದ ವೇಳೆ ಮಹಿಳೆಗೆ 500 ರೂ. ಮುಖಬೆಲೆಯ ನೋಟನ್ನು ಜಮೀರ್ ಕೊಟ್ಟಿದ್ದರು. ಗನ್ ಮ್ಯಾನ್ ಬಳಿಯಿಂದ ಹಣ ಪಡೆದು ಪ್ರಚಾರ ವಾಹನದ ಮೇಲಿಂದಲೇ ಮಹಿಳೆಗೆ ಹಣ ನೀಡಿದ್ದರು. ಈ ದೃಶ್ಯದ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಸಚಿವ ಜಮೀರ್, ರಹೀಂ ಖಾನ್, ಡಿ.ಕೆ.ಸುರೇಶ್ ಪ್ರಚಾರ ನಡೆಸಿದ್ದರು. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ
Advertisement
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಾಂಗ್ರೆಸ್ ಸಚಿವರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್ ಗೆಲ್ಲಿಸಿ: ಹೆಚ್‌ಡಿಕೆ ಮನವಿ