ನವದೆಹಲಿ: ಇಡೀ ದೇಶವನ್ನೇ ನಡುಗಿಸಿದ ದೆಹಲಿಯ (Delhi) ಶ್ರದ್ಧಾ ವಾಕರ್ (Shraddha Walkar) ಕ್ರೂರ ಹತ್ಯೆಯ ಬೆನ್ನಲ್ಲೇ ಇನ್ನೊಂದು ಅಂತಹುದೇ ಭೀಕರ ಹತ್ಯೆ (Murder) ನಡೆದಿದೆ. ಪತಿಯನ್ನು (Husband) ಕೊಂದು, ಆತನ ದೇಹವನ್ನು ಕತ್ತರಿಸಿ, ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದು ಮಾತ್ರವಲ್ಲದೇ ದೆಹಲಿ ನೆರೆಹೊರೆಯ ಪ್ರದೇಶಗಳಲ್ಲಿ ಹೂತು ಹಾಕಿದ ಆರೋಪದ ಮೇಲೆ ಮಹಿಳೆ (Wife) ಹಾಗೂ ಆಕೆಯ ಮಗನನ್ನು (Son) ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಜೂನ್‌ನಲ್ಲಿ ಪಾಂಡವ ನಗರದಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ಮನುಷ್ಯನ ಕೆಲ ದೇಹದ ಭಾಗಗಳು ಸಿಕ್ಕಿದ್ದವು. ಅವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಭೀಕರ ವಿವರಗಳು ಬೆಳಕಿಗೆ ಬರುತ್ತಲೇ ಈ ಅಪರಿಚಿತ ದೇಹದ ಭಾಗಗಳು ಆಕೆಯದೇ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ಆ ದೇಹದ ಭಾಗಗಳು ಶ್ರದ್ಧಾ ವಾಕರ್‌ಗೆ ಸೇರಿದ್ದಲ್ಲ, ಬದಲಿಗೆ ಅವು ಪಾಂಡವ ನಗರ ನಿವಾಸಿ ಅಂಜನ್ ದಾಸ್ ಎಂಬವರದ್ದು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
Advertisement
A woman along with her son arrested by Crime Branch in Delhi’s Pandav Nagar for murdering her husband. They chopped off body in several pieces,kept in refrigerator & used to dispose of pieces in nearby ground: Delhi Police Crime Branch
(CCTV visuals confirmed by police) pic.twitter.com/QD3o5RwF8X
— ANI (@ANI) November 28, 2022
Advertisement
ಆರೋಪಿಗಳಾದ ಪೂನಂ ಮತ್ತು ಆಕೆಯ ಮಗ ದೀಪಕ್ ಜೂನ್‌ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ದಾಸ್ ಅವರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಸ್‌ಗೆ ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿದೆ. ಬಳಿಕ ಅವರ ದೇಹವನ್ನು ಕತ್ತರಿಸಿ, ತುಂಡುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟಿದ್ದು, ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ
Advertisement
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಹುಡುಕಿದ್ದಾರೆ. ವೀಡಿಯೋದಲ್ಲಿ ದೀಪಕ್ ತಡರಾತ್ರಿ ಕೈಯಲ್ಲಿ ಚೀಲವೊಂದನ್ನು ಹಿಡಿದುಕೊಂಡು ಹೋಗಿದ್ದು, ಆತನ ತಾಯಿ ಪೂನಂ ದೀಪಕ್‌ನನ್ನು ಹಿಂಬಾಲಿಸುವುದು ಕಂಡುಬಂದಿದೆ. ಆರೋಪಿಗಳು ದಾಸ್ ಅವರ ತುಂಡರಿಸಿದ ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಚೀಲದಲ್ಲಿ ಕೊಂಡೊಯ್ದಿದ್ದಾರೆ ಎಂದು ಶಂಕಿಸಲಾಗಿದೆ.
Advertisement
6 ತಿಂಗಳ ಹಿಂದೆ ದೆಹಲಿಯಲ್ಲಿ ಅಫ್ತಾಬ್ ಪೂನಾವಾಲಾ ತನ್ನ ಲಿವ್‌ಇನ್ ಪಾರ್ಟ್‌ನರ್ ಶ್ರದ್ಧಾ ವಾಕರ್ ಕತ್ತು ಹಿಸುಕಿ ಹತ್ಯೆ ನಡೆಸಿದ್ದು, ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ದಕ್ಷಿಣ ಮೆಹ್ರೌಲಿ ಅರಣ್ಯದಲ್ಲಿ ಹೂತಿದ್ದ. ಈ ಭೀಕರ ಹತ್ಯೆ ಕೆಲ ದಿನಗಳ ಹಿಂದೆಯಷ್ಟೇ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?
Live Tv
[brid partner=56869869 player=32851 video=960834 autoplay=true]