ಕನ್ನಡದಲ್ಲಿ ಮತ್ತೊಂದು ‘ಮುಂಗಾರು ಮಳೆ’ ಆಗಮನ: ನಾಳೆ ಟ್ರೈಲರ್ ರಿಲೀಸ್

Public TV
1 Min Read
Mungaru Male 1

ಗಾಗಲೇ ಕನ್ನಡ ಚಿತ್ರೋದ್ಯಮದ ಹಲವು ಮುಂಗಾರುಗಳನ್ನು ಕಂಡಿದೆ. ಮುಂಗಾರು ಮಳೆಯಂತೂ ನೆನಪಿಡುವಂತೆ ಸುರಿದಿದೆ. ಇದೀಗ ಮತ್ತೊಂದು ಮುಂಗಾರು ಮಳೆಯ (Munagaru Male) ಕಥೆಯನ್ನು ಹೇಳಲು ಹೊರಟಿದ್ದಾರೆ ಹಿರಿಯ ಪತ್ರಕರ್ತ ಮಾ.ಸೋಮಶೇಖರ್ (Somashekhar). ಹಲವು ಕಥೆಗಳ ಗುಚ್ಛವನ್ನು ಹುಡುಕಿ ತೆಗೆದಿದ್ದು, ಒಂದೊಂದೇ ಕಥೆಗಳನ್ನು ಶಾರ್ಟ್ ಸಿನಿಮಾಗಳ ಮೂಲಕ ಹೇಳುತ್ತಾ ಹೋಗುತ್ತಿದ್ದಾರೆ.

Mungaru Male 3

ಪ್ರೀತಿ, ಪ್ರೇಮ, ವಿರಹ ಹೀಗೆ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ಹಲವು ಕಂತುಗಳಲ್ಲಿ ಈ ಕಥೆಗಳನ್ನು ಹೇಳುತ್ತಾ ಹೋಗುತ್ತಾರಂತೆ. ಅದರ ಮೊದಲ ಭಾಗವಾಗಿ ಮುಂಗಾರು ಮಳೆ ಕಥೆಯನ್ನು ಹೇಳುತ್ತಿದ್ದಾರೆ. ಈ ಎಲ್ಲ ಗುಚ್ಛಕ್ಕೆ ಅವರು ‘ಖಾಸಗಿ ಕಥೆಗಳು’ (Khasagi Kathegalu) ಎಂದು ಹೆಸರನ್ನು ಇಟ್ಟಿದ್ದಾರೆ. ಭಾಗ 2ರಲ್ಲಿ ಮತ್ತೊಂದು ಕಥೆಯನ್ನು ಹೇಳುತ್ತಾರಂತೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

Mungaru Male1

ಖಾಸಗಿ ಕಥೆಗಳು ಶಾರ್ಟ್ ಮೂವೀಯಲ್ಲಿ ಹಲವು ಬಗೆಯ ಕಥೆಗಳನ್ನು ಹೇಳುತ್ತಿದ್ದೇನೆ. ಪ್ರತಿ ಕಥೆಗೂ ಕಲಾವಿದರು ಬದಲಾಗುತ್ತಾರೆ. ಪ್ರೀತಿ, ಪ್ರೇಮ, ವಿರಹವೇ ಇಲ್ಲಿ ಪ್ರಧಾನವಾಗಿರಲಿದೆ. ಯಾರೂ ಹೇಳಿಕೊಳ್ಳಲಾಗದ ಕಥೆಗಳನ್ನು ಹುಡುಕಿದ್ದೇನೆ. ಕಥೆಯ ಮಧ್ಯ ಮಧ್ಯೆ ಕವಿತೆಗಳು ಬಂದು ಹೋಗುತ್ತವೆ. ಇದೇ ಈ ಸೀರಿಸ್‍್ ನ ಬ್ಯೂಟಿ ಎನ್ನುತ್ತಾರೆ ನಿರ್ದೇಶಕ ಸೋಮಶೇಖರ್.

ಮುಂಗಾರು ಮಳೆ ಕಥೆಯಲ್ಲಿ ಹೇಮಲತಾ (Hemalatha) ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಅವರ ಫಸ್ಟ್ ಲುಕ್ ಅನ್ನು ನಿರ್ದೇಶಕರು ಬಿಡುಗಡೆ ಮಾಡಿದ್ದರು. ನಾಳೆ ಸಂಜೆ 5 ಗಂಟೆಗೆ ಮುಂಗಾರು ಮಳೆಯ ಟ್ರೈಲರ್ (Trailer) ರಿಲೀಸ್ ಆಗುತ್ತಿದೆ. ಎಸ್.ಜೆ ದೊಡ್ಮನೆ ಈ ಶಾರ್ಟ್ ಮೂವೀಗೆ ಹಣ ಹೂಡಿದ್ದು, ಚೇತನ್ ಚಾರ್ಲಿ ಕ್ರಿಯೇಟಿವ್ ಹೆಡ್ ಆಗಲಿ ಕೆಲಸ ಮಾಡಿದ್ದಾರೆ. ಪ್ರಸನ್ನ ಕುಮಾರ್ ಅವರ ಸಂಗೀತ, ಲೋಕೇಶ್ ನಾಯ್ಡು ಅವರ ಕ್ಯಾಮೆರಾ, ನಿತಿನ್ ರಾಜ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

Web Stories

Share This Article