ಶ್ರೀನಿವಾಸರಾಜು (Srinivas Raju) ನಿರ್ದೇಶನದ, ಚರಣ್ ಅರ್ಜುನ್ ಸಂಗೀತ ನೀಡಿರುವ “ಹುಬ್ಬಳ್ಳಿ ಡಾಬಾ” (Hubli Dhaba) ಚಿತ್ರದ ಹಾಡೊಂದು ಆದಿತ್ಯ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಡಾ||ವಿ.ನಾಗೇಂದ್ರಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಮೋಹನ ಭೋಗರಾಜು ಹಾಡಿರುವ ಈ ಹಾಡು ಮೆಚ್ಚುಗೆ ಪಡೆಯುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 4 ರಂದು ತೆರೆಗೆ ಬರಲಿದೆ.
“ದಂಡುಪಾಳ್ಯ”, ” ಶಿವಂ” ಸೇರಿದಂತೆ ವಿಭಿನ್ನ ರೀತಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಅವರ ನಿರ್ದೇಶನದ 10ನೇ ಚಿತ್ರವಿದು. ನಿರ್ದೇಶಕರೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. “ಹುಬ್ಬಳ್ಳಿ ಡಾಬಾ” ಚಿತ್ರ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ನವೆಂಬರ್ 4 ರಂದು ಎರಡೂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ
ನವೀನ್ ಚಂದ್ರ, ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ, ರವಿಶಂಕರ್ (Ravi Shankar), ರಾಜಾ ರವೀಂದರ್, ಅಯ್ಯಪ್ಪ ಶರ್ಮ, ನಾಗಾ ಬಾಬು, ಪೃಥ್ವಿ, ಪೂಜಾ ಗಾಂಧಿ (Pooja Gandhi), ರವಿ ಕಾಳೆ, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಮುನಿರಾಜು, ಜೈದೇವ್ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ, ಗ್ಯಾರಿ ಬಿ.ಹೆಚ್ ಸಂಕಲನ ಹಾಗೂ ವೆಂಕಟ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.