ಬೆಳಗಾವಿ: ತಾಲೂಕಿನ ಹಿಂಡಲಗಾ ಜೈಲಿನಲ್ಲಿರುವ (Hindalaga Jail) ಕೈದಿಯ (Prisoner) ಹೆಸರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ (Life threatening Call) ಮಾಡಲಾಗಿದ್ದು ಈ ಬಗ್ಗೆ ಮಹಾರಾಷ್ಟ್ರ (Maharashtra) ಎಟಿಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Advertisement
ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಹೆಸರು ಬಳಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಲಾಗಿದ್ದು 10 ಕೋಟಿ ರೂ. ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆ ನಾಗ್ಪುರದ ನಿತಿನ್ ಗಡ್ಕರಿ ಕಚೇರಿ ಬಳಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ: ದೆಹಲಿ ಹೊಸ ಮದ್ಯ ನೀತಿ ಹಗರಣ – ಕೆ. ಕವಿತಾ ಮೊಬೈಲ್ ವಶಕ್ಕೆ ಪಡೆದ ಇಡಿ
Advertisement
Advertisement
ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳಿಂದ ತನಿಖೆ ಮುಂದುವರಿದ್ದು ಈ ಹಿಂದೆ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್ ಕಾಂತಾ ಹೆಸರಿನಿಂದ ಜನವರಿ 14 ರಂದು ನಿತಿನ್ ಗಡ್ಕರಿ ಕಚೇರಿಗೆ ಜೀವ ಬೆದರಿಕೆ ಕರೆ ಬಂದಿತ್ತು. ಆಗ ಹಿಂಡಲಗಾ ಜೈಲಿಗೆ ಭೇಟಿ ನೀಡಿದ್ದ ಮಹಾರಾಷ್ಟ್ರದ ಅಧಿಕಾರಿಗಳ ತಂಡ ತನಿಖೆ ನಡೆಸಿದ್ದರು. ಈಗ ಮತ್ತೆ ಕೈದಿ ಜಯೇಶ್ ಕಾಂತಾ ಹೆಸರಿನಲ್ಲಿ ಜೀವ ಬೆದರಿಕೆ ಹಾಕಲಾಗಿದ್ದು, ಈ ಕರೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ತನಿಖೆಯನ್ನು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದನ್ನೂ ಓದಿ: 80 ಸಾವಿರ ಪೊಲೀಸರು ಏನ್ ಮಾಡ್ತಿದ್ದಾರೆ – ಅಮೃತ್‌ಪಾಲ್ ಸಿಂಗ್ ಬಂಧಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ