ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್ (Kiccha Sudeep) ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾದ ಟೀಸರ್ ಕೆಲವೇ ಗಂಟೆಗಳಲ್ಲಿ 25 ಮೀಲಿಯನ್ ದಾಟುತ್ತಿದ್ದಂತೆಯೇ ಸಿನಿಮಾದ ಲೆಕ್ಕಾಚಾರವೇ ಬದಲಾಗುತ್ತಿದೆ. ಈ ಸಿನಿಮಾ ಮೊದಲು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಬರೋಬ್ಬರಿ ಒಂಬತ್ತು ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆರ್.ಚಂದ್ರು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ಬದಲಾಗಿದೆ.
Advertisement
ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಈ ಸಿನಿಮಾದ ಮೇಕಿಂಗ್ ಮತ್ತು ಗುಣಮಟ್ಟವನ್ನು ಕೆಜಿಎಫ್ ಚಿತ್ರಕ್ಕೆ ಹೋಲಿಸಲಾಯಿತು. ಅದ್ಧೂರಿ ಮೇಕಿಂಗ್, ಕ್ಯಾಮೆರಾ ವರ್ಕ್, ಶೂಟಿಂಗ್ ಮಾಡಿರುವ ಶೈಲಿ, ಹಿನ್ನೆಲೆ ಸಂಗೀತ, ಭಾರೀ ಸೆಟ್ ಇದೆಲ್ಲವನ್ನೂ ಗಮನಿಸಿ ಕನ್ನಡದ ಮತ್ತೊಂದು ಕೆಜಿಎಫ್ (KGF 2) ಸಿನಿಮಾ ಎಂದು ಕಬ್ಜವನ್ನು ಬಣ್ಣಿಸಲಾಯಿತು. ಹೀಗಾಗಿ ಸಿನಿಮಾ ವಿದೇಶದಲ್ಲೂ ಡಿಮಾಂಡ್ ಕ್ರಿಯೇಟ್ ಮಾಡಿದೆ. ಕೆಜಿಎಫ್ ಚಿತ್ರವು ಯಾವೆಲ್ಲ ದೇಶಗಳಲ್ಲಿ ಬಿಡುಗಡೆ ಆಯಿತೋ ಅಷ್ಟು ದೇಶಗಳಿಂದ ಕಬ್ಜ ಸಿನಿಮಾಗೆ ಬೇಡಿಕೆ ಬಂದಿದೆ.
Advertisement
Advertisement
ಕಬ್ಜ ಸಿನಿಮಾದ ಟೀಸರ್ (Teaser) ಮಾಡಿದ ಮೋಡಿಯಿಂದಾಗಿ ಭಾರತದಲ್ಲೂ ಚಿತ್ರಕ್ಕೆ ಸಖಯ್ ಡಿಮಾಂಡ್ ಕ್ರಿಯೇಟ್ ಆಗಿದೆ ಎನ್ನಲಾಗುತ್ತಿದೆ. ಬಾಲಿವುಡ್, ತಮಿಳು ಹಾಗೂ ತೆಲುಗು ಸಿನಿಮಾ ರಂಗದ ಖ್ಯಾತ ವಿತರಕ ಸಂಸ್ಥೆಗಳು ಈಗಾಗಲೇ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಕುರಿತು ಮಾತನಾಡಿದ ನಿರ್ದೇಶಕ ಆರ್.ಚಂದ್ರು, (R. Chandru) ‘ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಮಾಡಲು ವಿತರಕರು ಮುಂದೆ ಬಂದಿದ್ದಾರೆ. ಇನ್ನೂ ಅದು ಮಾತುಕತೆ ಹಂತದಲ್ಲಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚೆ ಸಿನಿಮಾಗೆ ಡಿಮಾಂಡ್ ಕ್ರಿಯೆಟ್ ಆಗಿದೆ. ಅಲ್ಲದೇ, ಬೇರೆ ಬೇರೆ ದೇಶಗಳಿಂದಲೂ ಡಿಮಾಂಡ್ ಬರುತ್ತಿದೆ’ ಎನ್ನುತ್ತಾರೆ.
Advertisement
ಈಗಾಗಲೇ ಕನ್ನಡದ ಕೆಜಿಎಫ್ 2 ಸಿನಿಮಾ ಸರ್ವ ರೀತಿಯಲ್ಲೂ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್ (Box Office) ಅನ್ನೇ ನಡುಗಿಸಿದೆ. ಸಾವಿರಾರು ಕೋಟಿ ಬ್ಯುಸಿನೆಸ್ ಮಾಡುವ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಕಬ್ಜ ಸಿನಿಮಾದ ಲೆಕ್ಕಾಚಾರ ಕೂಡ ಇದೀಗ ಸಾವಿರ ಕೋಟಿಯಲ್ಲಿ ಶುರುವಾಗಿದೆ. ಬಾಲಿವುಡ್ ಚಿತ್ರ ವಿಮರ್ಶಕರು ಹಾಗೂ ಸಿನಿ ಟ್ರೇಡ್ ಅನಾಲಿಸಿಸ್ ಕೂಡ ಕೆಜಿಎಫ್ ಸಿನಿಮಾದೊಂದಿಗೆ ಕಬ್ಜವನ್ನು ಕಂಪೇರ್ ಮಾಡುತ್ತಿರುವುದರಿಂದ ಕಬ್ಜ ಕೂಡ ಮಾರುಕಟ್ಟೆಯನ್ನು ವಿಸ್ತರಿಸಬಹುದು ಎಂದು ವಿವರಿಸುತ್ತಿದ್ದಾರೆ.