ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನಭಾ ನಟೇಶ್ ಹೀಗೆ ಸಾಲು ಸಾಲು ನಾಯಕಿಯರು ಸ್ಯಾಂಡಲ್ ವುಡ್ ತೊರೆದು ತಮಿಳು (Tamil), ತೆಲುಗು ಚಿತ್ರೋದ್ಯಮಗಳತ್ತ ಮುಖ ಮಾಡಿದ್ದಾರೆ. ಇವರ ಸಾಲಿಗೆ ಇದೀಗ ಬೃಂದಾ ಆಚಾರ್ಯ (Brinda Acharya) ಕೂಡ ಸೇರ್ಪಡೆಗೊಂಡಿದ್ದಾರೆ. ಪ್ರೇಮಂ ಪೂಜ್ಯಂ, ಕೌಸಲ್ಯಾ ಸುಪ್ರಜಾ ರಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿರುವ ಬೃಂದಾ, ಎರಡು ಕನ್ನಡ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಅದರಲ್ಲಿ ಒಂದು ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಜೊತೆಗೆ ತಮಿಳು ಚಿತ್ರಕ್ಕೂ ಸಹಿ ಮಾಡಿದ್ದೇನೆ. ಅದರಲ್ಲಿ ಗ್ರಾಫಿಕ್ಸ್ ಜಾಸ್ತಿ ಇರುವುದರಿಂದ ತಡವಾಗಬಹುದು ಎಂದು ಹೇಳಿಕೊಂಡಿದ್ದಾರೆ. ಆದರೆ, ತಮಿಳು ಚಿತ್ರದ ಬಗ್ಗೆ ಅವರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದನ್ನೂ ಓದಿ:ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ
ಸದ್ಯ ಬೃಂದಾ ಆಚಾರ್ಯ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಈ ಸಿನಿಮಾದ ನಾಯಕ. ಶಶಾಂಕ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಅವರು ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರಂತೆ. ತೆರೆಯ ಮೇಲೆ ಹೇಗೆ ಕಾಣಿಸುತ್ತೇನೆ ಎಂದು ನೋಡಲು ಉತ್ಸುಕಳಾಗಿದ್ದೇನೆ ಎಂದಿದ್ದಾರೆ ಬೃಂದಾ.
ಮಾಡೆಲಿಂಗ್ ಜಗತ್ತಿನ ಬಗ್ಗೆಯೂ ಮಾತನಾಡಿರುವ ಅವರು, ಮಾಡೆಲಿಂಗ್ ಮತ್ತು ಸಿನಿಮಾ ಎರಡೂ ವೃತ್ತಿ ಇಷ್ಟ, ಅಲ್ಲಿಯೂ ಅವಕಾಶ ಸಿಕ್ಕರೆ ಹೋಗುತ್ತೇನೆ. ಆ ಕಾರಣದಿಂದಾಗಿ ಮತ್ತಷ್ಟು ಸಿನಿಮಾಗೆ ಆಫರ್ ಬರಬಹುದು ಎನ್ನುವುದು ಬೃಂದಾ ಮಾತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]