ಬೆಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಸಿಡಿದೆದ್ದಿರುವ ಸಾರಿಗೆ ನೌಕರರನ್ನ ಸರ್ಕಾರ ಅದೆಷ್ಟೇ ಮನವೊಲಿಸುವ ಪ್ರಯತ್ನ ಪಟ್ಟರೂ, ನೌಕರರು ಮಾತ್ರ ಪಟ್ಟು ಸಡಿಲಿಸುವಂತೆ ಕಾಣಿಸುತ್ತಿಲ್ಲ. ಈಗ ಸರ್ಕಾರ ಕೊಟ್ಟಿರುವ ಮತ್ತೊಂದು ಆಫರ್‌ಗೂ ಬಗ್ಗದ ನೌಕರರು ಆಫರ್ ತಿರಸ್ಕರಿಸುವುದರ ಜೊತೆಗೆ ಪ್ರತಿಭಟನೆ ಮಾಡೇ ಮಾಡುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ.
ಸಾರಿಗೆ ನೌಕರರು (Transport Employees) ಮತ್ತು ಸರ್ಕಾರದ ನಡುವಿನ ಜಗ್ಗಾಟ ಹೊಂದಾಣಿಕೆ ಹಂತವನ್ನೇ ತಲುಪುತ್ತಿಲ್ಲ. ಸರ್ಕಾರ ನೌಕರರ ಬೇಡಿಕೆ ಸಂಬಂಧ ಹೊಸ ಆಫರ್ ಕೂಡ ನಿರಾಕರಿಸಿರುವ ಮಾಡಿರೋ ನೌಕರರು, ನಮ್ಮ ಸಂಪೂರ್ಣ ಬೇಡಿಕೆ ಈಡೇರಲೇಬೇಕು ಅನ್ನೋ ಪಟ್ಟಿನೊಂದಿಗೆ ಇಂದು ಬೆಂಗಳೂರು ಚಲೋಗೆ (Bengaluru Chalo) ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಚಲೋ ನಡೆಯುತ್ತೆ, ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿ: ಸಂಘಟನೆ ಮನವಿ
ಬುಧವಾರವಷ್ಟೇ ಸಾರಿಗೆ ನೌಕರರು ಹೋರಾಟ ಜೋರಾಗುವ ಸಾಧ್ಯತೆ ಕಂಡುಕೊಂಡ ಸರ್ಕಾರ, ನೌಕರರನ್ನ ಸಮಾಧಾನ ಪಡಿಸುವ ಯತ್ನಕ್ಕೆ ಮುಂದಾದರೂ ಪ್ರಯೋಜನ ಆಗಿಲ್ಲ. ನೌಕರರ ಬೇಡಿಕೆ ಪ್ರಕಾರ ಸರ್ಕಾರ 38 ತಿಂಗಳ ಅರಿಯರ್ಸ್ ಮತ್ತು 2024ರಿಂದ ವೇತನ ಪರಿಷ್ಕರಣೆ ಮಾಡಬೇಕಿದೆ. ಆದರೆ ಇದಕ್ಕೆ ಒಪ್ಪದ ಸರ್ಕಾರ, 26 ತಿಂಗಳ ಅರಿಯರ್ಸ್‌ನೊಂದಿಗೆ 2025ರಿಂದ ವೇತನ ಪರಿಷ್ಕರಣೆ ಆದೇಶ ಮಾಡಿ, ನೌಕರರನ್ನ ಮನವೊಲಿಸಲು ಮುಂದಾಗಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಸೊಪ್ಪು ಹಾಕದ ನೌಕರರು ಇಂದು ಸರ್ಕಾರದ ವಿರುದ್ಧ ಬೆಂಗಳೂರು ಚಲೋಗೆ ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ಕತ್ತು ಹಿಸುಕಿ ವೃದ್ಧೆಯ ಹತ್ಯೆ – ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್
ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಸಂಜೆ ನಾಲ್ಕು ಗಂಟೆವರೆಗೆ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗೆ ಅವಕಾಶ ನೀಡಿದ್ದು, ಸಂಜೆ ಒಳಗಾಗಿ ಪೂರ್ಣಪ್ರಮಾಣದಲ್ಲಿ ಬೇಡಿಕೆ ಈಡೇರಿಸಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಒಂದೊಮ್ಮೆ ಸರ್ಕಾರ ಇದಕ್ಕೆ ಒಪ್ಪದೇ ಹೋದರೆ ಇಂದು ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರಕ್ಕೆ ಮುಂದಾಗುವ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: Transport Strike – 38ರ ಬದಲು 26 ತಿಂಗಳ ಹಿಂಬಾಕಿಗೆ ಸರ್ಕಾರ ಒಪ್ಪಿಗೆ

