ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೊಬ್ಬಳು ಸಿಖ್ ಯುವತಿಯ ಅಪಹರಣ ಆಗಿದ್ದು, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ.
ಶನಿವಾರ ಸಿಖ್ ಯುವತಿ ರೇಣುಕಾ ಕುಮಾರಿಯನ್ನು ಅಪಹರಣ ಮಾಡಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಆಲ್ ಪಾಕಿಸ್ತಾನ ಹಿಂದೂ ಪಂಚಾಯತ್ ಸಂಸ್ಥೆ ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದೆ.
Advertisement
ರೇಣುಕಾ ಅವರನ್ನು ಸಿಂಧ್ ಪ್ರಾಂತ್ಯದ ಸುಕ್ಕೂರ್ ನಲ್ಲಿ ಇರುವ ತನ್ನ ಕಾಲೇಜ್ ಇನ್‍ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್(ಐಬಿಎ)ಯಿಂದ ಅಪಹರಿಸಲಾಗಿದೆ. ಅವರು ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಓದುತ್ತಿದ್ದರು. ರೇಣುಕಾ ಅಗಸ್ಟ್ 29ರಂದು ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ವೇಳೆ ನಾಪತ್ತೆಯಾಗಿದ್ದಾಳೆ.
Advertisement
Advertisement
ನನ್ನ ಸಹೋದರಿ ನನ್ನ ಜೊತೆ ಓದುತ್ತಿದ್ದ ಬಾಬರ್ ಅಮಾನ್‍ನನ್ನು ಪ್ರೀತಿಸುತ್ತಿದ್ದಳು. ಮದುವೆಯಾದ ನಂತರ ಇಬ್ಬರು ಈಗ ಸಿಯಾಲ್ಕೋಟ್‍ನಲ್ಲಿ ಇದ್ದಾರೆ ಎಂದು ರೇಣುಕಾ ಸಹೋದರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ರೇಣುಕಾ ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಕಾರ್ಯಕರ್ತೆ ಮಿರ್ಜಾ ದಿಲಾವರ್ ಬೇಗ್ ಅವರ ಮನೆಯಲ್ಲಿ ಇದ್ದಾರೆ ಎಂದು ಮೂಲಗಳಿಂದ ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಶನಿವಾರ ರಾತ್ರಿ ಅಮನ್ ಸಹೋದರನನ್ನು ಬಂಧಿಸಿದ್ದಾರೆ.
Advertisement
ಕಳೆದ ಗುರುವಾರದಂದು ಯುವಕರ ಗುಂಪೊಂದು ಸಿಖ್ ಯುವತಿಯ ಸಹೋದರ ಹಾಗೂ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಒತ್ತಡ ಹೆಚ್ಚುತ್ತಿದ್ದಂತೆಯೇ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದರು. ಪಂಜಾಬ್ ಪ್ರಾಂತ್ಯದ ನಂಕನಾ ಸಾಹಿಬ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಯನ್ನು ಬಂಧಿಸಿದ್ದರು.