ಬೆಂಗಳೂರು: ಮುಡಾ ಹಗರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಿಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಪವಿತ್ರ ಎಂಬ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆದರಿಕೆ ಹಾಗೂ ಪ್ರೋ.ಮೈಲಾರಪ್ಪ ವಿರುದ್ಧ ಕೊಟ್ಟಿರುವ ಕೇಸ್ ವಾಪಸ್ ಪಡೆದುಕೊಳ್ಳುವಂತೆ ಬೆದರಿಕೆ ಹಾಗೂ ಒತ್ತರ ಹಾಕುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣದ ದೂರುದಾರನೇ ಅರೆಸ್ಟ್ – ಸ್ನೇಹಮಯಿ ಕೃಷ್ಣ ಮನೆ, ಕಚೇರಿ ಮೇಲೆ ದಾಳಿ
ಸದ್ಯ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಸ್ನೇಹಮಯಿ ಕೃಷ್ಣ ಅವರನ್ನು ಎ1 ಆರೋಪಿಯನ್ನಾಗಿ ಬಸವೇಶ್ವರ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

