ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

Public TV
1 Min Read
One 8 commune bar

ಬೆಂಗಳೂರು: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ.

ಪ್ರತ್ಯೇಕ ಸ್ಥಳ ಮೀಸಲಿಡದೆ ಧೂಮಪಾನಕ್ಕೆ ಅವಕಾಶ ನೀಡಿದ್ದಕ್ಕಾಗಿ ಬೆಂಗಳೂರಿನ (Bengaluru) ಕಸ್ತೂರ್‌ಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಬಾರ್ & ರೆಸ್ಟೋರೆಂಟ್‌ನ (One 8 Commune Restro-Bar) ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Mysuru | 60 ಗ್ರಾಂ ಚಿನ್ನ ಕದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ

ಮೇ 29ರಂದು ಕಬ್ಬನ್ ಪಾರ್ಕ್ ಪೊಲೀಸರು (Cubbon Park Police)  ಬಾರ್ ಮೇಲೆ ದಾಳಿ ಮಾಡಿ, ಸ್ವಯಂಪ್ರೇರಿತವಾಗಿ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದರು. ಇದೀಗ ನ್ಯಾಯಾಲಯದ ಅನುಮತಿ ಪಡೆದು, ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ 2024ರ ಜುಲೈನಲ್ಲಿ ಇದೇ ಬಾರ್ ಮೇಲೆ ಅವಧಿ ಮೀರಿ ಪಬ್ ನಡೆಸುತ್ತಿದ್ದರು ಎಂದು ದೂರು ದಾಖಲಾಗಿತ್ತು. ಜು.6 ರಂದು ರಾತ್ರಿ 1:20ರವರೆಗೆ ಪಬ್ ತೆರೆದಿತ್ತು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರುವುದಾಗಿ ಮಾಹಿತಿ ಇತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವಧಿ ಮುಗಿದಿದ್ದರೂ ಗ್ರಾಹಕರು ಇದ್ದರು. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಇದನ್ನೂ ಓದಿ: ಚಪ್ಪಲಿಯಿಂದ ಹೊಡೆದ ಪ್ರಕರಣ – ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ

Share This Article