ಮಡಿಕೇರಿ: ಜಲಪ್ರಳಯದ ಹೊಡೆತಕ್ಕೆ ತತ್ತರಿಸಿದ್ದ ಕರ್ನಾಟಕದ ಕಾಶ್ಮೀರ ಕೊಡಗು ಇದೀಗ ತಾನೇ ಚೇತರಿಸಿಕೊಳ್ಳುತ್ತಿದೆ. ದುರಂತವನ್ನು ಮರೆತು ಜನ ಸಹಜ ಜೀವನಕ್ಕೆ ಹೊಂದಿಕೊಳ್ಳಲು ತೊಡಗಿದ್ದಾರೆ. ಆದರೆ ಅದು ಮತ್ತೆ ಬರುತ್ತೆ ಎಂದು ಜನರು ಭಯದಲ್ಲಿದ್ದಾರೆ.
ಕರ್ನಾಟಕದ ಸ್ವಿಡ್ಜರ್ ಲೆಂಡ್, ಪ್ರವಾಸಿಗರ ಹಾಟ್‍ಸ್ಪಾಟ್ ಎನಿಸಿಕೊಂಡಿದ್ದ ಕೊಡಗಿಗೆ ಮತ್ತೆ ಮಳೆಯ ಭೀತಿ ಆವರಿಸಿದೆ. ನೂರಾರು ವರ್ಷಗಳಿಂದ ಇಲ್ಲಿಯ ಜನರ ಬದುಕು ಪ್ರಕೃತಿ ಮಡಿಲಲ್ಲೇ ಸಾಗುತ್ತಿತ್ತು. ಈ ಬಾರಿ ವರುಣ ಕೊಟ್ಟ ಹೊಡೆತಕ್ಕೆ ಇನ್ನಿಲ್ಲದಂತೆ ಇಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಈಗ ಮಳೆ ಬ್ರೇಕ್ ಕೊಟ್ಟಿರೋದರಿಂದ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವ ಯತ್ನದಲ್ಲಿದ್ದಾರೆ. ಆದರೆ ತಮ್ಮ ಮನೆಗಳಿಗೆ ವಾಪಸ್ ಹೋಗಲು ಮತ್ತೆ ಮಳೆಯ ಭಯ ಶುರುವಾಗಿದೆ. ಹವಾಮಾನ ಇಲಾಖೆ ಕೊಡಗು ಸೇರಿ ಅನೇಕ ಕಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವುದು ಇವರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕರ್ನಾಟಕದ ಕಾಶ್ಮೀರ ಕೊಡಗು ಖಾಲಿ ಖಾಲಿ- ಪ್ರವಾಸಿಗರಿಲ್ಲದೇ ಭಣಗುಡುತ್ತಿವೆ ಪ್ರವಾಸಿ ತಾಣಗಳು
ಜಳಪ್ರಳಯಕ್ಕೆ ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದರೆ, ಸಾವಿರಾರು ಮನೆಗಳಿಗೆ ಹಾನಿ ಸಂಭವಿಸಿದೆ. ಮಡಿಕೇರಿ ನಗರದಲ್ಲೇ ಮೂವತ್ತಕ್ಕೂ ಹೆಚ್ಚು ಮನೆಗಳು ಕೊಚ್ಚಿಕೊಂಡು ಹೋಗಿದ್ದು, ಸುಮಾರು 200 ಮನೆಗಳಿಗೆ ಹಾನಿ ಉಂಟಾಗಿದೆ. ಮುಖ್ಯವಾಗಿ ಗುಡ್ಡದ ಅಂಚಿನಲ್ಲಿರೋ ಇಂದಿರಾ ನಗರ, ಚಾಮುಂಡೇಶ್ವರಿ ನಗರದ ಜನರಿಗೆ ಭಯದಲ್ಲೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ನೂರಾರು ವರ್ಷಗಳಿಂದ ಇಂತಹ ಅನೇಕ ಮಳೆಗಳನ್ನು ನೋಡಿದ ಇಲ್ಲಿನ ಜನ ಈ ಬಾರಿಯ ವರುಣಾಘಾತಕ್ಕೆ ನಲುಗಿ ಹೋಗಿದ್ದಾರೆ. ಇನ್ನೇನು ಮಳೆ ನಿಂತಿತ್ತು ಅಂತ ನಿಟ್ಟುಸಿರೋ ಬಿಡುವ ಹೊತ್ತಲ್ಲಿ ಮತ್ತೆ ಮಳೆಯ ಮುನಸೂಚನೆ ನೀಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv