ಬಾಗಲಕೋಟೆ: ಈರುಳ್ಳಿ ಬೆಲೆ ಕುಸಿತ ವಿಚಾರವಾಗಿ ಇತ್ತೀಚೆಗೆ ಪ್ರಧಾನಿ ಮೋದಿಗೆ ಬಾಗಲಕೋಟೆ ರೈತರೊಬ್ಬರು ಟ್ವೀಟ್ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ರೈತ ನೀರಾವರಿ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ಗಿರೀಶ್ ಪಾಟಿಲ್ ಎಂಬವರು ಮೋದಿಗೆ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನೀರಾವರಿಗಾಗಿ ಯೋಜನೆ ಜಾರಿ ಮಾಡುವಂತೆ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ನವೆಂಬರ್ 13 ರಂದು ಇದೇ ವಿಚಾರವಾಗಿ ಮೋದಿಗೆ ಈ ಬಗ್ಗೆ ಪತ್ರ ಕೂಡ ಬರೆದಿದ್ದರು.
Advertisement
@narendramodiಬಾರತದ ಪ್ರದಾನಮಂತ್ರಿಗಳೆದಯವಿಟ್ಟು ಕನಾ೯ಟಕಸರಕಾರಕ್ಕೆ ಘಟಪ್ರಬಾ ಬಲದಂಡೆನೀರಾವರಿ ಯೋಜನೆಯ ಮಾಡಿ 16ವರುಷಗಳಾದರು ನೀರುಕೋಡಲು ಸಾದ್ಯವಾಗಿಲ್ಲ ಆದ್ದರಿಂದ ಕೊನೆಯ ಹಳ್ಳಿಯ ರೈತರಿಗೆ ಸ್ಪಂದಿಸುವಂತೆ ಸರಕಾರಕ್ಕೆ ಮಾಗ೯ದಶ೯ನ ನೀಡಬೇಕಾಗಿ ವಿನಂತಿಯೋಜನೆಯ ವಿವರಗಳನ್ನು ತಮ್ಮ ಕಚೇರಿಗೆ ಪೋಸ್ಟ ಮುಲಕ ಕಳುಹಿಸಲಾಗಿದೆ pic.twitter.com/eC0VLWhR8Y
— Girish Patil (@GirishP53292411) November 26, 2018
Advertisement
ಸದ್ಯ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಮೋದಿಯಲ್ಲಿ ಮನವಿ ಮಾಡಿದ್ದಾರೆ. ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡು 16 ವರ್ಷ ಕಳೆದರೂ ನೀರು ಬಂದಿಲ್ಲ. ನಮ್ಮ ಭಾಗದ ಕಾಲುವೆಗಳಿಗೆ ನೀರು ಹರಿಸಲು ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡಿ ಎಂದು ರೈತ ರೈತ ಗಿರೀಶ್ ಮನವಿ ಮಾಡಿದ್ದಾರೆ.
Advertisement
@narendramodi . Sir we want to solve the formers problems form karnataka state bagalakot kudachi railways land acquired and full fill the gajected issue for this railway project bcz all formers are suffering the land loss and give Group D jobs by the railway Dept pic.twitter.com/XbMKvmmlIQ
— Girish Patil (@GirishP53292411) November 26, 2018
Advertisement
ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಹಿಂದಿನ ನೀರಾವರಿ ಸಚಿವ ಎಂ.ಬಿ ಪಾಟೀಲ್ ಅವರಿಗೆ ಪತ್ರ ಮೂಲಕ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ನಮ್ಮ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ಮಾಡಿ ಎಂದು ಹೇಳಿದ್ದಾರೆ.
ಸೋಮವಾರ ಸಂಜೆ 4.43ಕ್ಕೆ ಟ್ವೀಟ್ ಮಾಡಿದ ರೈತ ಮೋದಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ಮೋದಿ ಕಡೆಯಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಮೋದಿ ಪ್ರತಿಕ್ರಿಯೆಗಾಗಿ ರೈತ ಗಿರೀಶ್ ಕಾದು ಕುಳಿತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv