ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ದುರ್ಮರಣಕ್ಕೀಡಾದ ಘಟನೆ ನಡೆದ ಬಳಿಕವೂ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಇದೀಗ ಮೆಟ್ರೋದಿಂದ ಮತ್ತೊಂದು ದುರಂತ ತಪ್ಪಿದೆ.
Advertisement
ಕಬ್ಬಿಣದ ಪೀಸ್ ಬಿದ್ದು ಕಾರಿನ ಕ್ಲಾಸ್ ಜಖಂ ಆದ ಘಟನೆ ಸ್ಯಾಂಡಲ್ ಸೋಪ್ ಫ್ಯಾಕ್ಟರಿ (Sandal Soap Factory) ಮೇಟ್ರೋ ಸ್ಟೇಷನ್ ಕೆಳಗೆ ನಡೆದಿದೆ. ರಿತೇಶ್ ಎಂಬವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಕಾರು ಮೇಟ್ರೋ ಸ್ಟೇಷನ್ ಕೆಳಗೆ ಬರುತ್ತಿದ್ದಂತೆಯೇ ಕಬ್ಬಿಣದ ಪೀಸ್ ಕಾರಿನ ಗ್ಲಾಸ್ ಮೇಲೆ ಬಿದ್ದಿದೆ. ಪೀಸ್ ಬಿದ್ದ ರಭಸಕ್ಕೆ ಕಾರಿನ ಗಾಜು ಕೂಡ ಪೀಸ್ ಪೀಸ್ ಆಗಿದೆ.
Advertisement
Advertisement
ಘಟನೆ ನಡೆದ ಬಳಿಕ ಕಬ್ಬಿಣದ ಪೀಸ್ ಎಲ್ಲಿಂದ ಬಿತ್ತು ಅನ್ನೋ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೇಟ್ರೋ (Metro) ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಆಗಿದೆ ಎಂದು ಇದೀಗ ಕಾರಿನ ಮಾಲೀಕ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ನಮ್ಮ ಸೊಸೈಟಿ ಬಗ್ಗೆ ಮಾತಾಡಲು ನೀನ್ಯಾರು?- ಎನ್.ಆರ್ ಸಂತೋಷ್‍ಗೆ ಗ್ರಾಮಸ್ಥರಿಂದ ತರಾಟೆ
Advertisement
ಈ ಸಂಬಂಧ ಬಿಎಂಆರ್ ಸಿಎಲ್ ಅಧಿಕಾರಿ ಯಶವಂತ್ ಚೌಹಾಣ್ ಪ್ರತಿಕ್ರಿಯಿಸಿ, ಮೆಟ್ರೊ ಕಾಮಗಾರಿ ದುರಸ್ತಿ ಕಾರ್ಯ ಇಲ್ಲಿ ಯಾವುದೂ ನಡೆಯುತ್ತಿರಲಿಲ್ಲ. ಹೀಗಾಗಿ ಈ ಅವಘಡಕ್ಕೂ ಮೆಟ್ರೋಗೂ ಸಂಬಂಧ ಇಲ್ಲ. ಇಂದು ವೇಳೆ ಮೆಟ್ರೋ ಎಡವಟ್ಟಿನಿಂದ ಆಗಿದ್ರೆ ಪೊಲೀಸರು ತನಿಖೆ ಮಾಡಲಿ. ಆದರೆ ನಮ್ಮ ಮಾಹಿತಿಯ ಪ್ರಕಾರ ಇದು ನಮ್ಮಿಂದ ಆದ ಅವಘಡ ಅಲ್ಲ ಎಂದು ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.