ಒಂದಿಲ್ಲೊಂದು ಕಾರಣದಿಂದಾಗಿ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ವಿವಾದಕ್ಕೀಡಾಗುತ್ತಿದ್ದಾರೆ. ಹಾಡಿನಲ್ಲಿ ಅವರು ಹೆಸರು ಎಷ್ಟು ಜನಪ್ರಿಯನೋ, ವಿವಾದದ ಕಾರಣದಿಂದಾಗಿಯೂ ಅಷ್ಟೇ ಫೇಮಸ್. ಇದೀಗ ಮಂಗ್ಲಿ ಹಾಡಿರುವ ಗೀತೆಯೊಂದು ವಿವಾದಕ್ಕೀಡಾಗಿದ್ದು, ಹಲವರು ಹಲವು ರೀತಿಯಲ್ಲಿ ಪ್ರಶ್ನೆ ಮಾಡುವಂತಾಗಿದೆ. ಅದರಲ್ಲೂ ಈ ಹಾಡನ್ನು ಶೂಟ್ ಮಾಡಿದವರ ವಿರುದ್ಧ ದೂರು ನೀಡುವಂತೆ ಆಗ್ರಹಿಸಲಾಗುತ್ತಿದೆ.
Advertisement
ಪ್ರತಿ ಶಿವರಾತ್ರಿಯಂದು ಮಂಗ್ಲಿ ಹಾಡಿರುವ ಶಿವನ ಗೀತೆಯೊಂದು ಬಿಡುಗಡೆ ಆಗುತ್ತದೆ. ಅದನ್ನು ಅವರು ಸಂಪ್ರದಾಯ ಎನ್ನುವಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಶಿವರಾತ್ರಿ ದಿನದಂದೂ, ಅವರು ಹಾಡಿರುವ ಗೀತೆಯೊಂದು ರಿಲೀಸ್ ಆಗಿದೆ. ಅದೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಾಡು ದಕ್ಷಿಣದ ಕೈಲಾಸ ಎಂದೇ ಖ್ಯಾತಿಯಾಗಿರುವ ಶ್ರೀ ಕಾಳಹಸ್ತೀಶ್ವರಾಲಯದಲ್ಲಿ ಚಿತ್ರೀಕರಣವಾಗಿದ್ದು, ಮಂಗ್ಲಿ ದೇವಸ್ಥಾನದೊಳಗೆ ಕುಣಿದಿದ್ದಾರೆ.
Advertisement
Advertisement
ಶ್ರೀಕಾಳಹಸ್ತಿಯಲ್ಲಿ ಒಂದು ಸಂಪ್ರದಾಯವಿದೆ. ಪ್ರತಿ ದಿನ ಸಂಜೆ 6 ಗಂಟೆಗೆ ರಾಹುಕೇತು ಪೂಜೆ ಮುಗಿದ ನಂತರ ಮಂಟಪ ಮುಚ್ಚಲಾಗುತ್ತದೆ. ಆದರೆ, ಮಂಗ್ಲಿ ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ಮಂಟಪವನ್ನು ತೆರೆಯಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ, ದೇಗುಲದಲ್ಲಿ ಛಾಯಾಗ್ರಹಣಕ್ಕೆ ನಿರ್ಬಂಧವಿದ್ದರೂ, ಶೂಟಿಂಗ್ ಗೆ ಅನುಮತಿ ಕೊಟ್ಟವರು ಯಾರು? ಎನ್ನುವ ಪ್ರಶ್ನೆ ಮೂಡಿದೆ.
Advertisement
ಕಾಳಹಸ್ತಿ ಕಾಲಭೈರವ ದೇವಸ್ಥಾನದಲ್ಲಿ ಶೂಟ್ ಮಾಡಿರುವ ‘ಭಂ ಭಂ ಭೋಲೆ’ ಹಾಡು ರಿಲೀಸ್ ಆಗಿ ವೈರಲ್ ಕೂಡ ಆಗಿದೆ. ಸುದ್ದಲ ಅಶೋಕ್ ತೇಜ್ ಈ ಹಾಡನ್ನು ಬರೆದಿದ್ದು, ಕಾಲಭೈರವ ಸ್ವಾಮಿ ವಿಗ್ರಹದ ಮುಂದೆಯೇ ಮಂಗ್ಲಿ ನೃತ್ಯವನ್ನೂ ಮಾಡಿದ್ದಾರೆ. ಜೊತೆಗೆ ಮುಕ್ಕಂಟಿ ದೇವಸ್ಥಾನದಲ್ಲೂ ಸಹ ಮಂಗ್ಲಿ ಡಾನ್ಸ್ ಮಾಡಿದ್ದಾಳೆ. ಆ ಹಾಡೇ ವಿವಾದಕ್ಕೆ ಕಾರಣವಾಗಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k