ಚಿಕ್ಕಮಗಳೂರು: ತಾಲೂಕಿನ ದತ್ತಪೀಠದ (Dattapeeta) ಉಮೇದುವಾರಿಕೆಗಾಗಿ ಮೂರ್ನಾಲ್ಕು ದಶಕಗಳಿಂದ ಹಿಂದೂ-ಮುಸ್ಲಿಮರು ಹೋರಾಡುತ್ತಲೇ ಇದ್ದಾರೆ. ಈ ಮಧ್ಯೆ ಮಾಜಿ ಸಚಿವ ಹಾಗೂ ದತ್ತಪೀಠ ಮುಕ್ತಿಯ ಮುಂಚೂಣಿ ಹೋರಾಟಗಾರ ಸಿ.ಟಿ ರವಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಇಂದು ದತ್ತಮಾಲೆ ಧರಿಸಿ ದತ್ತಪೀಠದ ಬಗ್ಗೆ ಮಾತನಾಡಿದ ಸಿ.ಟಿ ರವಿ (CT Ravi), ಟೆನೆಂಟ್ ಆಕ್ಟ್ ಬರುವ ಮೊದಲೇ ಮುಜರಾಯಿ ದಾಖಲೆಗಳ ಪ್ರಕಾರ ದತ್ತಾತ್ರೇಯರ ಹೆಸರಲ್ಲಿ 1861 ಎಕರೆ ಜಮೀನಿತ್ತು. ಈಗ ಆ ಜಮೀನು ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ದತ್ತಾತ್ರೇಯರ ಸ್ಥಿರಾಸ್ಥಿಯನ್ನ ಕಾಂಗ್ರೆಸ್ಸಿಗರು ಒತ್ತುವರಿ ಮಾಡಿಕೊಂಡಿದ್ದರೆ, ಚರಾಸ್ಥಿಯನ್ನ ಅಕ್ರಮ ಪರಭಾರೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?
ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತವಾಗಿರೋ ತಾಲೂಕಿನ ದತ್ತಪೀಠದ ದತ್ತಾತ್ರೇಯರನ್ನ ವಿವಾದದ ದೇವರು ಅಂತಾನೆ ಕರೆಯುತ್ತಾರೆ. ಇದರ ಉಮೇದುವಾರಿಕೆಗಾಗಿ ಹಿಂದೂ-ಮುಸ್ಲಿಮರು ಕೋರ್ಟ್ ಒಳಗೂ-ಹೊರಗೂ ದಶಕಗಳಿಂದ ಹೋರಾಡುತ್ತಿದ್ದಾರೆ. ಆದರೀಗ ಮಾಜಿ ಸಚಿವ ಸಿ.ಟಿ.ರವಿ ಹೊಸದೊಂದು ಬಾಂಬ್ ಸಿಡಿಸಿದ್ದು, ದತ್ತಾತ್ರೇಯರಿಗೆ ಮತ್ತೊಂದು ವಿವಾದ ಅಂಟಿಕೊಂಡಿದೆ. ಟೆನೆಂಟ್ ಆಕ್ಟ್ ಬರುವ ಮೊದಲೇ ದತ್ತಾತ್ರೇಯರ ಹೆಸರಲ್ಲಿ 1861 ಎಕರೆ ಜಮೀನಿತ್ತು. ಆ ಜಮೀನು ಈಗ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ದತ್ತಾತ್ರೇಯರ ಚರಾಸ್ತಿ ಅಕ್ರಮ ಪರಭಾರೆ ಬಗ್ಗೆ ದಿ.ಮೇಜರ್ ಪೂವಯ್ಯ ನೇತೃತ್ವದ ಸಮಿತಿಯ ತನಿಖೆಯಲ್ಲಿ ಸಾಬೀತಾಗಿತ್ತು. ಇನ್ನು ಸ್ಥಿರಾಸ್ತಿ 1861 ಎಕರೆ ಜಮೀನನ್ನ ನಕಲಿ ದಾಖಲೆ ಸೃಷ್ಟಿಸಿ ಪ್ರಭಾವಿಗಳು ಕಬಳಿಸಿದ್ದಾರೆ ಎಂದು ಸಿ.ಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕಾಫಿನಾಡ ದತ್ತಜಯಂತಿಗೆ ಅಧಿಕೃತ ಚಾಲನೆ; ಸಿ.ಟಿ.ರವಿ ಮಾಲಾಧಾರಣೆ – ಜಿಲ್ಲಾದ್ಯಂತ ಹೈ ಅಲರ್ಟ್
ದಾಖಲೆಗಳನ್ನ ಪರಿಶೀಲನೆ ಮಾಡಿ. ದತ್ತಾತ್ರೇಯರ ಬಹುತೇಕ ಆಸ್ತಿಯನ್ನ ಕಬಳಿಸಿರೋರು ಕಾಂಗ್ರೆಸ್ಸಿಗರು. ಅದರಲ್ಲಿ ಪ್ರಭಾವಿಗಳು ಸೇರಿದ್ದಾರೆ. ಆಸ್ತಿ ಹೋಗುತ್ತಲ್ಲಾ ಅಂತ ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ದರ್ಗಾ-ದತ್ತಪೀಠ ಬೇರೆ-ಬೇರೆ ಅಂತ ಅವರಿಗೂ ಗೊತ್ತು. ಆದರೆ ದತ್ತಾತ್ರೇಯರ ಆಸ್ತಿ ಕಬಳಿಸಿದ್ದಾರೆ. ಅದನ್ನ ಹೊಡೆಯೋದಕ್ಕೋಸ್ಕರ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದ್ದಾರೆ. ಇನ್ನು ಚುನಾವಣೆ ವೇಳೆ ಕಾಂಗ್ರೆಸ್ಸಿಗರು ನಾವು ಹಿಂದೂಗಳು, ನಾವು ದತ್ತಪೀಠಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಬಂದರಾ ಎಂದು ಪ್ರಶ್ನಿಸಿದ್ದಾರೆ. ದತ್ತಪೀಠದ ವಿಚಾರದಲ್ಲಿ ಕಾಂಗ್ರೆಸ್ಸಿಗರು ನಾಟಕ ಮಾಡುವ ಬದಲು ಸತ್ಯವನ್ನ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವೋಟಿನ ಆಸೆಗೆ ಸುಳ್ಳು ಹೇಳುವುದನ್ನ ಬಿಡಬೇಕು. ಹಿಂದಿನಿಂದಲೂ ಹೇಳುತ್ತಿದ್ದೇವೆ. ದತ್ತಪೀಠ-ದರ್ಗಾ ಬೇರೆ-ಬೇರೆ. ದರ್ಗಾ ಜಾಗರ ಹೋಬಳಿ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿ ಇಂದಿಗೂ ಇದೆ. ಅದನ್ನ ಅವರು ಜನ್ನತ್ ನಗರ ಅಂತಾರೆ. ಬಾಬಾಬುಡನ್ ದರ್ಗಾ ಅಲ್ಲಿದೆ. ಬಾಬಾಬುಡನ್ ಅವರಿಗೆ ಸಂಬಂಧಿಸಿದ ಸಮಾದಿ ಅಲ್ಲಿದೆ ಅನ್ನೋದಕ್ಕೆ ಸರ್ಕಾರಿ ದಾಖಲೆ ಹೇಳುತ್ತೆ. ದತ್ತಪೀಠ ಇರೋದು ದತ್ತಪೀಠ ಗ್ರಾಮದ ಸರ್ಕಾರಿ ದಾಖಲೆ ಸರ್ವೇ ನಂಬರ್ 195ರಲ್ಲಿ ಇದೆ. ಅದು ಎಲ್ಲರಿಗೂ ಗೊತ್ತು. ಆದರೆ ದತ್ತಪೀಠದ ಆಸ್ತಿ ಕಬಳಿಸಿರೋರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರು ದತ್ತಪೀಠದ ಬಗ್ಗೆ ಸುಳ್ಳು-ಅಪಪ್ರಚಾರ ಮಾಡುವ ಬದಲು ದಾಖಲೆಗಳನ್ನ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.