ಬೆಂಗಳೂರು: ತುಮಕೂರು (Tumkuru) ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ಜೀವಗಳು ಬಲಿಯಾದ ಬೆನ್ನಲ್ಲೇ, ಬೆಂಗಳೂರಿನಲ್ಲೊಂದು ದುರಂತ ನಡೆದಿದೆ. ವೈದ್ಯರ (Doctor) ನಿರ್ಲಕ್ಷ್ಯಕ್ಕೆ 4 ವರ್ಷದ ಮಗು ಬಲಿಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ತುಮಕೂರಿನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಇಬ್ಬರು ಅವಳಿ ನವಜಾತ ಶಿಶುಗಳು ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ (Indira Gandhi istitute of Childe Helath) ಮತ್ತೊಂದು ದುರಂತ ನಡೆದಿದೆ. ಟ್ರೈನಿ ವೈದ್ಯರ ಚಿಕಿತ್ಸೆಯಿಂದ 4 ವರ್ಷದ ಬುದ್ಧಿಮಾಂದ್ಯ ಬಾಲಕ (Boy) ಮೃತಪಟ್ಟಿದ್ದಾನೆ ಎಂದು ಮೃತ ಬಾಲಕನ ಪೋಷಕರು ಆರೋಪ ಮಾಡಿದರು.
Advertisement
Advertisement
ಜಾಲಹಳ್ಳಿಯ ಡೇವಿಡ್ ಎಂಬವರು ತನ್ನ 4 ವರ್ಷದ ಡಾರ್ವಿನ್ ಎಂಬ ಮಗುವನ್ನು ಭಾನುವಾರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬೆನ್ನು ಮೂಳೆಯಲ್ಲಿ ನೀರು ತೆಗೆಯಲು, ಪೋಷಕರ ಅನುಮತಿ ಪಡೆಯದೇ ಟ್ರೈನಿ ವೈದ್ಯರು ಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆಗೂ ಮುನ್ನ ಆಕ್ಟಿವ್ ಆಗಿದ್ದ ಮಗು, ಚಿಕಿತ್ಸೆಯ ನಂತರ ಪ್ರಜ್ಞೆತಪ್ಪಿ ಮೃತಪಟ್ಟಿದ್ದಾನೆ. ತಜ್ಞ ವೈದ್ಯರು ಇಲ್ಲದೇ, ಮನಸ್ಸಿಗೆ ಬಂದಂಗೆ ಚಿಕಿತ್ಸೆ ಕೊಟ್ಟು ನನ್ನ ಮಗುವನ್ನು ಸಾಯಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ತಿಳಿಸಿದರು.
Advertisement
ಆಸ್ಪತ್ರೆಗೆ ತಮ್ಮ ಮಗುವನ್ನು ಕರೆದುಕೊಂಡು ಬಂದಿದ್ದ ಇತರೆ ಪೋಷಕರು ಕೂಡ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಇನ್ನೂ ಇಷ್ಟೆಲ್ಲ ಆದ ಬಳಿಕ, ಆಸ್ಪತ್ರೆಯ ಆಡಳಿತ ಮಂಡಳಿ, ಈ ಘಟನೆಯ ಬಗ್ಗೆ ಸ್ಪಷ್ಟಿಕರಣ ಕೊಡದೇ ಬೇಜವಾಬ್ದಾರಿತನ ಪ್ರದರ್ಶಿಸಿದೆ. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಯಶಸ್ವಿ: ರಾಜ್ಯದಲ್ಲಿ 10.5 ಲಕ್ಷ ಕೋಟಿ ಹೂಡಿಕೆ
Advertisement
ವೈದ್ಯರ ಬೇಜವಾಬ್ದಾರಿಯನ್ನು ಖಂಡಿಸಿ, ಮೃತ ಬಾಲಕ ಪೋಷಕರು, ಹಾಗೂ ಆಸ್ಪತ್ರೆಯಲ್ಲಿದ್ದ ಜನ, ಮೃತ ಬಾಲಕನ ಶವ ಆಸ್ಪತ್ರೆಯ ಮುಂದಿಟ್ಟು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್ ಹೊಡೆದು ಬೈಕ್ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು