ಭೋಪಾಲ್: ಕಳೆದ ವಾರ ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) 2 ಚೀತಾಗಳು (Cheetah) ಸಾವನ್ನಪ್ಪಿದ್ದು, ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ನ (Radio Collar) ಸುತ್ತಲೂ ತೀವ್ರವಾದ ಗಾಯಗಳು ಕಂಡುಬಂದಿತ್ತು. ಇದೀಗ ರೇಡಿಯೋ ಕಾಲರ್‌ನಿಂದಾಗಿ ಮತ್ತೊಂದು ಚೀತಾಗೆ ತೀವ್ರ ಗಾಯಗಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಇದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಇತ್ತೀಚೆಗೆ ತೇಜಸ್ ಹಾಗೂ ಸೂರಜ್ ಎಂಬ ಚೀತಾಗಳ ಸಾವಿನ ಬಳಿಕ ವೈದ್ಯರ ತಂಡ ಪವನ್ ಎಂಬ ಚೀತಾವನ್ನು ಪ್ರಜ್ಞಾಹೀನಗೊಳಿಸಿ, ಅದನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅದರ ಕುತ್ತಿಗೆಗೆ ಜೋಡಿಸಲಾಗಿದ್ದ ರೇಡಿಯೋ ಕಾಲರ್‌ನ ಸುತ್ತ ನಂಜು ಹಾಗೂ ತೀವ್ರವಾದ ಗಾಯ ಕಂಡುಬಂದಿದೆ. ತಕ್ಷಣವೇ ಅದರ ರೇಡಿಯೋ ಕಾಲರ್ ಅನ್ನು ತೆಗೆದುಹಾಕಲಾಗಿದ್ದು, ಸೋಂಕನ್ನು ಗುಣಪಡಿಸಲು ಚಿಕಿತ್ಸೆ ಪ್ರಾರಂಭಿಸಿದ್ದಾರೆ.
ಪ್ರಸ್ತುತ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 4 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಪರಿಸ್ಥಿತಿಯ ತೀವ್ರತೆಯನ್ನು ಗುರುತಿಸಿ ಚಿಕಿತ್ಸೆಯಲ್ಲಿ ಇನ್ನಷ್ಟು ಸಹಾಯ ಮಾಡಲು ಗ್ವಾಲಿಯರ್ ಹಾಗೂ ಭೋಪಾಲ್‌ನಿಂದ ಹೆಚ್ಚುವರಿ ನಾಲ್ವರು ವೈದ್ಯರನ್ನು ಕರೆಸಲಾಗಿದೆ. 8 ವೈದ್ಯರ ತಂಡ ಚೀತಾಗಳನ್ನು ಶಾಂತಗೊಳಿಸಲು ಹಾಗೂ ಅಗತ್ಯ ಔಷಧಿಗಳನ್ನು ನೀಡಲು ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!
ಸದ್ಯ ರೇಡಿಯೋ ಕಾಲರ್‌ಗಳಿಲ್ಲದಿದ್ದರೂ ಚೀತಾಗಳ ಚಲನವಲನಗಳ ಬಗ್ಗೆ ಗಮನಹರಿಸಲು ಡ್ರೋನ್ ಕ್ಯಾಮೆರಾಗಳ ಬಳಕೆ ಸಹಾಯವಾಗಲಿದೆ. ಭಾರತದಲ್ಲಿ ಚೀತಾಗಳ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕಳೆದ ವರ್ಷ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ತರಿಸಲಾಯಿತು. ಆದರೆ ಕಳೆದ 5 ತಿಂಗಳಿನಿಂದ ಅವುಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿವೆ. ಇದನ್ನೂ ಓದಿ: ISI ನಂಟಿನ ಶಂಕೆ – ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ತೀವ್ರ ವಿಚಾರಣೆ
Web Stories