– ಪ್ರಕರಣ ದಾಖಲಾಗ್ತಿದ್ದಂತೆ ನಟ ನಾಪತ್ತೆ
ನಟ ಚರಿತ್ ಬಾಲಪ್ಪ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಸುಲಿಗೆ, ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
Advertisement
ಕಿರುತೆರೆ ನಟ ಚರಿತ್ ಬಾಲಪ್ಪ ಅಲಿಯಾಸ್ ಧ್ರುವಂತ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Advertisement
ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ, ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ನೀಡಲಾಗಿತ್ತು. ದೂರು ದಾಖಲಾಗ್ತಿದ್ದಂತೆ ಚರಿತ್ ಬಾಲಪ್ಪ ನಾಪತ್ತೆಯಾಗಿದ್ದಾರೆ. ಈ ಹಿಂದೆಯೂ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ನಟ ಜೈಲು ಸೇರಿದ್ದರು.
Advertisement
ಆರೋಪ ಏನು?
ಸೀರಿಯಲ್ ಶೂಟಿಂಗ್ ನೋಡಲು ಹೋದಾಗ ಸಂತ್ರಸ್ತೆಗೆ ಚರಿತ್ ಪರಿಚಯವಾಗಿತ್ತು. ಬಳಿಕ ಚರಿತ್ ಒತ್ತಾಯದ ಮೇರೆಗೆ ಇಬ್ಬರ ನಡುವೆ ಪ್ರೀತಿ ಶುರುವಾಯಿತು. ಬಳಿಕ ಸಂತ್ರಸ್ತೆ ಬಿಟ್ಟು ಚರಿತ್ ಬೇರೆಯವರ ಮದುವೆಯಾಗಿದ್ದ. ಮದುವೆಯಾಗಿದ್ದರೂ ದೈಹಿಕ ಸಂಪರ್ಕ ಇಟ್ಟುಕೊಳ್ಳಲು ಸಂತ್ರಸ್ತೆಗೆ ಒತ್ತಾಯ ಮಾಡಿದ್ದ. ನಿರಾಕರಿಸಿದಾಗ ಸಂತ್ರಸ್ತೆ ಮನೆ, ಕೆಲಸ ಮಾಡುವ ಸ್ಥಳದಲ್ಲಿ ಗಲಾಟೆ ಮಾಡಿದ್ದ. ಪೊಲೀಸರಿಗೆ ದೂರು ನೀಡಿದ ಬಳಿಕ 2 ವರ್ಷ ಸುಮ್ಮನಿದ್ದ.
Advertisement
2022ರಲ್ಲಿ ಪತ್ನಿಯಿಂದ ನಟ ವಿಚ್ಛೇದನ ಪಡೆದಿದ್ದ. ಬಳಿಕ ಸಂತ್ರಸ್ತೆಗೆ ಪ್ರೀತಿಸುವಂತೆ, ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಬಲವಂತ ಮಾಡಿದ್ದ. ಒಪ್ಪದ ಕಾರಣ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ. ಖಾಸಗಿ ಫೋಟೋ ಶೇರ್ ಮಾಡುವುದಾಗಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ. ಹಣ, 4-5 ಕೆಜಿ ಬೆಳ್ಳಿ, 23 ಕಂಚಿ ರೇಷ್ಮೆ ಸೀರೆ ಪಡೆದಿದ್ದ. ಪದೇ ಪದೆ ಬ್ಲ್ಯಾಕ್‌ಮೇಲ್‌ನಿಂದ ನೊಂದು ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ.