ಗಾಂಧಿನಗರ (ಗುಜರಾತ್): ಕೊರೊನಾ ರೂಪಾಂತರಿ ಓಮಿಕ್ರಾನ್‌ಗಿಂತಲೂ ವೇಗವಾಗಿ ಹರಡುವ XE ರೂಪಾಂತರವು ಪ್ರಧಾನಿ ನರೇಂದ್ರಮೋದಿ ತವರಾದ ಗುಜರಾತ್‌ಗೆ ಲಗ್ಗೆಯಿಟ್ಟಿದೆ.
ಮುಂಬೈನಲ್ಲಿ ಈ ಹೊಸ ತಳಿ ಪತ್ತೆಯಾದ ಕೆಲವೇ ದಿನಗಳಲ್ಲಿ ಗುಜರಾತ್‌ಗೂ ಕಾಲಿಟ್ಟಿದೆ ಎಂದು ಮೂಲಗಳು ತಿಳಿಸಿವೆ. XE ತಳಿ ಪತ್ತೆಯಾದ ವ್ಯಕ್ತಿಯಿಂದ ಸಂಗ್ರಹಿಸಿದ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಯರ‍್ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್-ಕಿಸ್ ಮಾಡುವಂತಿಲ್ಲ; ಕೊರೊನಾ ಟಫ್ ರೂಲ್ಸ್
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈಚೆಗಷ್ಟೇ 53 ವರ್ಷದ ಮಹಿಳೆಯೊಬ್ಬರಲ್ಲಿ XE ತಳಿ ಇರುವುದಾಗಿ ವರದಿ ಮಾಡಿತ್ತು. ಆದರೆ, ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ಒಂದು ದಿನದ ನಂತರ ಆರೋಗ್ಯ ಇಲಾಖೆ ಈ ಬಗ್ಗೆ ದೃಢಪಡಿಸಿಲ್ಲ. ವರದಿ ಬಂದ ನಂತರ ಈ ಬಗ್ಗೆ ಮಾತನಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಎರಡೇ ದಿನಗಳಲ್ಲಿ ಗುಜರಾತ್‌ನಲ್ಲಿ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ತಿಳಿವೆ ಎನ್ನಲಾಗಿದೆ.