ಬೆಂಗಳೂರು: ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.
ಈ ಹಿಂದೆ ಕಿರುಕುಳ ದೂರು ನೀಡಿದ್ದ ಯಾಸ್ಮಿನ್ ಅವರೇ ಇದೀಗ ಮತ್ತೊಂದು ದೂರು ದಾಖಲು ಮಾಡಿದ್ದಾರೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶ ಕೊಡುಸ್ತೀನಿ ಎಂದು ಕಿರಣ್ ರಾಜ್ ಪಾಸ್ ಪೋರ್ಟ್ ಪಡೆದಿದ್ದನು. ಆದರೆ ಈಗ ಪಾಸ್ ಪೋರ್ಟ್ ನೀಡದೆ ಕಿರಣ್ ರಾಜ್ ಮತ್ತು ಆತನ ಕುಟುಂಬ ಕಿರುಕುಳ ನೀಡುತ್ತಿದ್ದಾರೆ ಎಂದು ಯಾಸ್ಮಿನ್ ಆರೋಪಿಸಿದ್ದಾರೆ.
Advertisement
ಯಾಸ್ಮಿನ್ ವಿದೇಶಕ್ಕೆ ಚಿತ್ರೀಕರಣಕ್ಕೆಂದು ಹೋಗಬೇಕಿತ್ತು. ಹಾಗಾಗಿ ಕಿರಣ್ ಹತ್ತಿರ ತನ್ನ ಪಾಸ್ ಪೋರ್ಟ್ ಕೇಳಿದ್ದಾರೆ. ಆದರೆ ಕಿರಣ್ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾನೆ. ಕಿರಣ್ ರಾಜ್ ಪಾಸ್ ಪೋರ್ಟ್ ಕೊಡದ ಹಿನ್ನಲೆಯಲ್ಲಿ ಕೆಲಸ ಕೈ ತಪ್ಪಿದೆ ಎಂದು ಯಾಸ್ಮಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಎಫ್ಐಆರ್ ದಾಖಲು!
Advertisement
Advertisement
ನನ್ನ ಮೇಲಿನ ದ್ವೇಷಕ್ಕೆ ನನಗೆ ಪಾಸ್ಪೋರ್ಟ್ ಅನ್ನು ಸರಿಯಾದ ಸಮಯಕ್ಕೆ ಕೊಡದೇ ನನ್ನ ಕೆಲಸಕ್ಕೆ, ಜೀವನದ ಅತಿ ಮುಖ್ಯವಾದ ಕೆಲಸಕ್ಕೆ ತೊಂದರೆ ಕೊಡಬೇಕೆಂದು ಹಾಗೂ ಮೋಸ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಯಾಸ್ಮಿನ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರೂಪದರ್ಶಿಗೆ ವಂಚನೆ- ಕಿರುತೆರೆ ನಟ ಕಿರಣ್ರಾಜ್ ಅರೆಸ್ಟ್
Advertisement
ಕಿರಣ್ ರಾಜ್ ವಿರುದ್ಧ 420, 506, 384 ಸೆಕ್ಷನ್ ಅಡಿಯಲ್ಲಿ ರಾಜಾರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.