ಬೆಂಗಳೂರು: ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬೆದರಿಕೆ ವಿಚಾರವಾಗಿ ನಿರ್ಮಾಪಕ ದಾಖಲಿಸಿದ್ದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballary Central Jail) ಆರೋಪಿ ದರ್ಶನ್‌ಗೆ (Actor Darshan) ಇದೀಗ ಇನ್ನೊಂದು ಸಂಕಷ್ಟ ಎದುರಾಗಿದೆ. ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿದ್ದರೂ ಆಪತ್ತು ತಪ್ಪದಂತೆ ಆಗಿದೆ.ಇದನ್ನೂ ಓದಿ: ಇಸ್ರೇಲ್, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ
ಈ ಹಿಂದೆ `ಭಗವಾನ್ ಶ್ರೀ ಕೃಷ್ಣಾ’ ಎಂಬ ಭರತ್ ನಿರ್ಮಾಣದ ಸಿನಿಮಾದಲ್ಲಿ ಧೃವನ್ ನಾಯಕನಾಗಿ ನಟಿಸುತ್ತಿದ್ದ. 2020ರಲ್ಲಿ ನಿರ್ಮಾಪಕ ಭರತ್ (Producer Bharath) ಸಿನಿಮಾದ ಶೂಟಿಂಗ್ ಶುರು ಮಾಡಿದ್ದ. ಆದರೆ ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ಸಿನಿಮಾ ನಿಂತುಹೋಗಿತ್ತು. ಈ ವಿಚಾರವಾಗಿ ನಟ ಧೃವನ್, ದರ್ಶನ್ ಬಳಿ ಹೋಗಿದ್ದ. ಈ ವೇಳೆ ದರ್ಶನ್‌ನಿಂದ ಭರತ್‌ಗೆ ಕರೆ ಮಾಡಿಸಿದ್ದ. ಆಗ ದರ್ಶನ್ `ನೀನೆ ಇರೋದಿಲ್ಲ’ ಎಂದು ಭರತ್‌ಗೆ ಬೆದರಿಕೆ ಹಾಕಿದ್ದರು.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ (Kengeri Police Station) ಸಿನಿಮಾ ವಿಚಾರವಾಗಿ ಧೃವನ್, ನಟ ದರ್ಶನ್ ಬಳಿ ಹೋಗಿ ಬೆದರಿಕೆ ಹಾಕಿಸಿದ್ದಾನೆ ಎಂದು ನಿರ್ಮಾಪಕ ಭರತ್ ದೂರು ದಾಖಲಿಸಿದ್ದರು. 2022ರ ಆ.5 ರಂದು ಧೃವನ್ ಮೇಲೆ ಎನ್‌ಸಿಆರ್ ದಾಖಲಾಗಿತ್ತು. ಆ ವೇಳೆ ಬೆದರಿಕೆ ಹಾಕಿದ್ದ ವಿಚಾರವಾಗಿ ದರ್ಶನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ದರ್ಶನ್ ಮತ್ತು ಧೃವನ್ ಮೇಲೆ ಕೆಂಗೇರಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗೂ ನೋಟಿಸ್ ಕೂಡ ಕೊಟ್ಟಿರಲಿಲ್ಲ.
ಇದೀಗ ಬೆದರಿಕೆ ಕೇಸ್ ಅಡಿಯಲ್ಲಿ ಆರೋಪಿ ಧೃವನ್ ಅಲಿಯಾಸ್ ಸೂರಜ್ ಕುಮಾರ್, ನಟ ದರ್ಶನ್, ದರ್ಶನ್ ಮ್ಯಾನೇಜರ್ ನಾಗರಾಜ್ ವಿರುದ್ಧ ಮತ್ತೆ ಎನ್‌ಸಿಆರ್ (Non-Cognizable Report) ದಾಖಲಾಗಿದೆ. ಜೈಲಿನಲ್ಲಿದ್ದರೂ ದರ್ಶನ್ ಪರದಾಡುವಂತಹ ಸ್ಥಿತಿ ಎದುರಾಗಿದೆ.ಇದನ್ನೂ ಓದಿ: ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ