ಬೆಂಗ್ಳೂರಲ್ಲಿ ವಾಲಿತು ಮತ್ತೊಂದು ಕಟ್ಟಡ – ಮಳೆಗೆ ನೆನೆದು ಕುಸಿಯುವ ಭೀತಿಯಲ್ಲಿದೆ ಬಿಲ್ಡಿಂಗ್

Public TV
1 Min Read
building

ಬೆಂಗಳೂರು: ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೆ ಬೆಂಗಳೂರಲ್ಲಿ ಮಳೆ ಅವಾಂತರ ಇನ್ನೂ ನಿಂತಿಲ್ಲ. ಯಶವಂತಪುರ ವಾರ್ಡ್ ನಂ-37ರಲ್ಲಿ 25ವರ್ಷಗಳ ಹಳೇ ಕಟ್ಟಡ ಕುಸಿದು ಆತಂಕ ಸೃಷ್ಟಿಯಾಗಿತ್ತು.

bng building 7

ಚಿಕ್ಕರಾಮಣ್ಣ ಎಂಬವರಿಗೆ ಸೇರಿದ ಕಟ್ಟಡ ಕಳೆದ ಎರಡು ತಿಂಗಳಿಂದ ಸುರಿದ ಭಾರಿ ಮಳೆಗೆ ನೆನೆದು ನೆನೆದು ಇಂದು ಕುಸಿದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ನಾಲ್ವರೂ ಅಪಾಯದಿಂದ ಕ್ಷಣಮಾತ್ರದಲ್ಲಿ ಪಾರಾಗಿದ್ದಾರೆ. ಕಳೆದ 13 ವರ್ಷಗಳಿಂದ ಈ ಮನೆಯನ್ನ ಬಾಡಿಗೆಗೆ ನೀಡಲಾಗಿತ್ತು. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ವಾಸವಾಗಿದ್ರು. ಮನೆ ಬಿರುಕು ಬಿಡುತ್ತಿದೆ ಅಂತ ಅಕ್ಕಪಕ್ಕದ ಮನೆಯವರು ಹೇಳಿದ ನಂತರ ಎಲ್ಲರೂ ಮನೆಯಿಂದ ಹೊರಬಂದಿದ್ರು. ಇದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ

bng building 1

ಹಳೇ ಕಟ್ಟಡದಲ್ಲಿ ಕೆಳಗಡೆ ಎರಡು ಅಂಗಡಿಗಳನ್ನ, ಮೇಲೆ ಒಂದು ಮನೆಯನ್ನ ಬಾಡಿಗೆಗೆ ನೀಡಲಾಗಿತ್ತು. ಸಹಜವಾಗಿ ದಿನಸಿ ಅಂಗಡಿಯಾಗಿದ್ದರಿಂದ ಇಲಿ-ಹೆಗ್ಗಣ ತಳಹದಿಯಲ್ಲಿ ಬಿಲಗಳನ್ನ ಮಾಡಿಕೊಂಡಿದ್ದವು. ಬಿಲಗಳಲ್ಲಿ ನೀರು ನುಗ್ಗಿ ತಳಹದಿ ಕುಸಿದ ಪರಿಣಾಮ ಬಿಲ್ಡಿಂಗ್ ಎರಡು ಅಡಿಗಳಷ್ಟು ವಾಲಿದೆ. ಪರಿಣಾಮ ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ಮಣ್ಣಿನಿಂದ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಕಟ್ಟಡದ ಹಿಂದೆ ನಾಲ್ಕು ಶೀಟ್ ಮನೆಗಳಿದ್ವು. ಹೀಗಾಗಿ ಕಟ್ಟಡ ಹಿಂದೆ ಬಿದ್ದಿದ್ರೆ ದೊಡ್ಡ ಅನಾಹುತ ಅಗುತ್ತಿತ್ತು.

bng building 10

ವಿಷಯ ತಿಳಿಯುತ್ತಲೇ ಸ್ಥಳೀಯ ಕಾರ್ಪೊರೇಟರ್ ಬಿ.ಕೆ.ವೆಂಕಟೇಶ್, ಬಿಬಿಎಂಪಿ ಎಇಇ ಉಮೇಶ್ ಹಾಗೂ ಯಶವಂತಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಟ್ಟಡ ತೆರವಿಗೆ ಸೂಚಿಸಿದ್ರು.

bng building 2

bng building 4

bng building 5

bng building 6

bng building 8

bng building 9

Share This Article
Leave a Comment

Leave a Reply

Your email address will not be published. Required fields are marked *