ಬಾಲಿವುಡ್‌ನ ‘ಆಶಿಕಿ 2’ (Ashiqui 2) ಹೀರೋ ಆದಿತ್ಯ ರಾಯ್ ಕಪೂರ್ (Aditya Roy Kapoor) ಹಾಗೂ ನಟಿ ಅನನ್ಯಾ ಪಾಂಡೆ (Ananya Panday) ಲವ್ವಿಡವ್ವಿ ವಿಚಾರ ಹೊಸದೇನೂ ಅಲ್ಲ. ಆದಿತ್ಯ ಜೊತೆ ಅನನ್ಯಾ ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಆದರೆ, ಇಬ್ಬರೂ ಗೆಳೆತನ ಕಡಿದುಕೊಂಡು (Break Up) ದೂರವಾಗಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ.
ಹಾಗಂತ ತಾವಿಬ್ಬರೂ ಬಹಿರಂಗವಾಗಿ ಎಂದೂ ಡೇಟ್ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡವರು ಅಲ್ಲ. ಇಬ್ಬರೂ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲ. ಆದರೂ ಇಬ್ಬರೂ ಜೊತೆಯಿರುವ ಫೋಟೋ ಲೀಕ್ ಆಗುತ್ತಿದ್ದವು. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಜೋಡಿಯ ಫೋಟೋ ಸದ್ದು ಮಾಡುತ್ತಿದ್ದವು.
- Advertisement
- Advertisement
ಈ ಇಬ್ಬರು ಸ್ಟಾರ್ ಕಿಡ್ಸ್ ಆಗಿದ್ದರು ಕೂಡ ಇಬ್ಬರಿಗೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಆಶಿಕಿ 2’ ಚಿತ್ರದಲ್ಲಿ ಗಮನ ಸೆಳೆದ ಆದಿತ್ಯ, ತಮ್ಮ ವೃತ್ತಿ ಜೀವನದಲ್ಲಿ ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ ಲೈಗರ್ ನಟಿ ಜೊತೆ ಆದಿತ್ಯ ಹೆಸರು ಕೇಳಿ ಬಂದು ಅಚ್ಚರಿ ಮೂಡಿಸಿತ್ತು.
ನಂತರ ಇಬ್ಬರೂ ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದರು. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್ ಎನ್ನುವುದು ಅವರು ಹಾಕಿದ್ದ ಫೋಟೋದಲ್ಲಿ ಸ್ಪಷ್ಟವಾಗಿತ್ತು. ಸ್ಪೇನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದರು. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿತ್ತು.
ಅನನ್ಯಾರನ್ನು ಆದಿತ್ಯ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಡದಿದ್ದರೂ, ತಾನಾಗಿಯೇ ಗೊತ್ತಾಗುತ್ತಿತ್ತು. ಈಗ ಇಂತಹ ಜೋಡಿ ದೂರವಾಗಿದೆ ಎನ್ನುವುದು ನೋವಿನ ಸಂಗತಿ.