– ಉಚ್ಛಾಟನೆ ಬೆನ್ನಲ್ಲೇ ಕಲಬುರಗಿಗೆ ಯತ್ನಾಳ್ ನೇರ ಭೇಟಿ
ವಿಜಯಪುರ: ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಬೆನ್ನಲ್ಲೇ ವಿಜಯಪುರ (Vijayapura) ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿಲ್ಲಾ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸೇರಿದಂತೆ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ಜಿಲ್ಲಾ ಕಾರ್ಯದರ್ಶಿ ಸಿದ್ದು ಹೆಬ್ಬಾಳ ಸಹ ರಾಜೀನಾಮೆ ನೀಡಿದ್ದಾರೆ.
ಹಿಂದೂ ಫೈರ್‌ಬ್ರಾಂಡ್, ಹಿಂದೂತ್ವದ ಗಟ್ಟಿಧ್ವನಿಯ ಉಚ್ಛಾಟನೆಯನ್ನ ಖಂಡಿಸುತ್ತೇವೆ ಎಂದಿರುವ ಸಿದ್ದು ಹೆಬ್ಬಾಳ ಅವರು, ರಾಜೀನಾಮೆ ಪತ್ರ ಬರೆದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ರವಾನಿಸಿದ್ದಾರೆ. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು
ಪ್ರತಿಭಟನೆಗೆ ಸಜ್ಜು:
ಇನ್ನೂ ಯತ್ನಾಳ್ ಅವರ ಉಚ್ಛಾಟನೆ ಮಾಡಿರುವ ಹೈಕಮಾಂಡ್ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಯತ್ನಾಳ್ ಬೆಂಬಲಿಗರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪ್ರತಿಭಟನೆ ಬಳಿಕ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆಯೂ ಚರ್ಚೆ ನಡೆಸುವುದಕ್ಕೂ ತಯಾರಿ ಮಾಡಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆ – ವಿಜಯಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು
ಯತ್ನಾಳ್ ಎಲ್ಲಿದ್ದಾರೆ?
ಇಂದು ಬೆಳಗ್ಗೆ ಹೈದ್ರಾಬಾದ್ ಮೂಲಕ ಕಲಬುರಗಿಯ ಚಿಂಚೋಳಿಗೆ ಆಗಮಿಸಿರುವ ಯತ್ನಾಳ್, ತಮ್ಮ ಒಡೆತನದ ಎಥೆನಾಲ್ ಕಾರ್ಖಾನೆಯ ಗೇಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದನ್ನೂ ಓದಿ: 2ನೇ ಬಾರಿ ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ