– ಮುಂಜಾನೆ 4 ಗಂಟೆ ಹೊತ್ತಿಗೆ ಪವಿತ್ರ ಸ್ನಾನ ಮಾಡಿದ 16 ಲಕ್ಷ ಭಕ್ತರು
ಪ್ರಯಾಗ್‌ರಾಜ್: ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭಮೇಳಕ್ಕೆ ಫೆ.3ರ ಸೋಮವಾರ ಮತ್ತೊಂದು ಸುತ್ತಿನಲ್ಲಿ ಕೋಟ್ಯಂತರ ಭಕ್ತರು ಹರಿದುಬರುತ್ತಿದ್ದಾರೆ. ಇಂದು ವಸಂತ ಪಂಚಮಿಯ ಪವಿತ್ರ ದಿನವಾಗಿದ್ದು, ತ್ರಿವೇಣಿ ಸಂಗಮದಲ್ಲಿ ಭಕ್ತರು ಮೂರನೇ ಅಮೃತ ಪುಣ್ಯಸ್ನಾನ ಮಾಡಿದ್ದಾರೆ.
Advertisement
ಕುಂಭಮೇಳದಲ್ಲಿ ಬೆಳಗಿನ ಜಾವವೇ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಬೂದಿ ಹಚ್ಚಿದ ನಾಗ ಸಾಧುಗಳು ಸ್ನಾನ ಮಾಡಿದರು. ನಂತರ ಇತರ ಭಕ್ತರು ಸ್ನಾನ ಮಾಡುವುದರೊಂದಿಗೆ ಆಚರಣೆ ಪ್ರಾರಂಭವಾಯಿತು. ಮಹಾ ಕುಂಭಮೇಳ ಪ್ರಾರಂಭವಾದಾಗಿನಿಂದ ಸ್ನಾನ ಮಾಡಿದವರ ಸಂಖ್ಯೆ ಇದುವರೆಗೂ 35 ಕೋಟಿಯಷ್ಟಾಗಿದೆ.
Advertisement
ಮುಂಜಾನೆ 4 ಗಂಟೆ ಹೊತ್ತಿಗೆ 16 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Advertisement
ಇಂದು ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ಇತ್ತೀಚೆಗೆ ಕುಂಭಮೇಳದಲ್ಲಿ ಜನಸಂದಣಿಯಿಂದಾಗಿ ಕಾಲ್ತುಳಿತಕ್ಕೆ 30 ಜನರು ಸಾವನ್ನಪ್ಪಿದ್ದರು. ಈ ದುರಂತ ಮತ್ತೆ ಸಂಭವಿಸಬಾರದು ಎಂದು ಜನಸಂದಣಿ ನಿರ್ವಹಿಸಲು ಹೆಚ್ಚಿನ ಸಂಖೈಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
Advertisement
ಕುಂಭಮೇಳದಲ್ಲಿ ನಡೆಯುವ ಪವಿತ್ರ ಶಾಹಿಸ್ನಾನದಲ್ಲಿ ವಸಂತ ಪಂಚಮಿ ಪ್ರಮುಖವಾಗಿದೆ. ಫೆ.12 ರಂದು ಮಹಾ ಪೂರ್ಣಿಮೆ ಮತ್ತು ಫೆ.26 ರಂದು ಮಹಾ ಶಿವರಾತ್ರಿ ದಿನ ಕೊಲೆ ಪುಣ್ಯ ಸ್ನಾನ ನೆರವೇರಲಿದೆ.