ಬೆಂಗಳೂರು: ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಹಾಗೂ ಇತರರಿಂದ ನಡೆದಿದ್ದ ರಾಬರಿ (Robbery) ಪ್ರಕರಣ ಮಾಸುವ ಮುನ್ನ ಮತ್ತೊಂದು ಪೇಮೆಂಟ್ ಸರ್ವಿಸ್ ಕಂಪನಿ ಸಿಬ್ಬಂದಿಯಿಂದ ಎಡವಟ್ಟು ನಡೆದಿರುವುದು ಬೆಳಕಿಗೆ ಬಂದಿದೆ. ಹಿಟಾಚಿ (Hitachi) ಕಂಪನಿಯ ಸಿಬ್ಬಂದಿಗಳು ಎಟಿಎಂಗೆ (ATM) ತುಂಬಲು ತೆಗೆದುಕೊಂಡಿದ್ದ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ.
ನಾಲ್ಕು ಮಂದಿಯ ಒಂದು ಟೀಂ 50 ಲಕ್ಷ ರೂ. ಹಣ ತಗೆದುಕೊಂಡು ಹೋಗಿದ್ದರೆ ಮೂರು ಜನರ ಮತ್ತೊಂದು ತಂಡ 80 ಲಕ್ಷ ರೂ. ಹಣ ತಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಎರಡು ವಂಚಕರ ತಂಡದ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಎಸ್‌ಬಿಐ, ಆಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಪೇಮೆಂಟ್ ಸರ್ವಿಸ್ ನೀಡುತ್ತಿದ್ದ ಹಿಟಾಚಿ ಪೇಮೆಂಟ್ ಪ್ರೈವೆಟ್ ಲಿಮಿಟೆಡ್. ಈ ಸಂಸ್ಥೆಯಲ್ಲಿ ಎಟಿಎಂಗೆ ಹಣ ಡೆಪಾಸಿಟ್ ಮಾಡುವ ಕೆಲಸ ಮಾಡ್ತಿದ್ದ ಆರೋಪಿಗಳು. 57 ಲಕ್ಷ ವಂಚನೆಯಲ್ಲಿ ಪ್ರವೀಣ್, ಧನಶೇಖ, ರಾಮಕ್ಕ, ಹರೀಶ್ ಕುಮಾರ್ ಆರೋಪಿಗಳಾದರೆ 80 ಲಕ್ಷ ರೂ. ವಂಚನೆಯಲ್ಲಿ ಹರೀಶ್ ಕುಮಾರ್, ಪ್ರವೀಣ್ ಕುಮಾರ್, ವರುಣ್ ಎಂಬ ಸಿಬ್ಬಂದಿ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಭಾರತ-EU ವ್ಯಾಪಾರ ಒಪ್ಪಂದದೊಂದಿಗೆ ಯುರೋಪ್ ತನ್ನ ವಿರುದ್ಧವೇ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ: ಅಮೆರಿಕ
ಕೋರಮಂಗಲದ ಆಕ್ಸಿಸ್ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋದ ಆರೋಪಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಒಟ್ಟು 1.40 ಕೋಟಿ ಹಣ ಆರೋಪಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆಂದು ದೂರು ನೀಡಲಾಗಿದೆ. 19ನೇ ಕೋರಮಂಗಲ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.ಘಟನೆ ಸಂಬಂದ ಕೇಸ್ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಯಾವ ಸಮಯದಿಂದ ಕೆಲಸ ಮಾಡುತ್ತಿದ್ದರು ಎಷ್ಟು ಸಮಯದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಬ್ಯಾಂಕ್‌ನವರಿಂದ ದಾಖಲೆ ಪಡೆದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಿಬಿಎ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಏರಿಕೆ – 369 ವಾರ್ಡ್‌ಗೆ 1,800 ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ

