ಕೊಪ್ಪಳ: ಐಸಿಸ್ (ISIS) ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ಕೊಪ್ಪಳದ ಪೊಲೀಸರು (Koppal Police) ಶಂಕಿತ ಶಬ್ಬೀರ್‌ನನ್ನು (Shabbir) ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಶಂಕಿತ ಉಗ್ರ ಶಬ್ಬೀರ್ ಮಂಡಲಗಿರಿಯಲ್ಲಿ ಹೋಲ್‌ಸೇಲ್ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಆತನಿಗೆ ಶಿವಮೊಗ್ಗದಲ್ಲಿ (Shivamogga) ಬಂಧಿತರಾಗಿದ್ದ ಯಾಸಿನ್ ಹಾಗೂ ಮಾಝ್ ಜೊತೆಗೆ ಸಂಪರ್ಕವಿತ್ತು ಎನ್ನಲಾಗಿದೆ. ಮೊಬೈಲ್ ಕಾಲ್ ಹಾಗೂ ಡೇಟಾಗಳ ಆಧಾರದ ಮೇಲೆ ಪೊಲೀಸರು ಶಬ್ಬೀರ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ
Advertisement
Advertisement
ಇದೀಗ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗಂಗಾವತಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರ ವಾಹನಗಳು ಸಂಚಾರ ಮಾಡುತ್ತಿದ್ದು, ಕಳೆದ ರಾತ್ರಿಯಿಂದಲೇ ಬೈಕ್ ಸವಾರರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಟೂರಿಸ್ಟ್ ಟೆಂಪೋ ಕಂದಕಕ್ಕೆ ಬಿದ್ದು 7 ವಿದ್ಯಾರ್ಥಿಗಳ ದುರ್ಮರಣ, 10 ಮಂದಿಗೆ ಗಾಯ