ಎರಡು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ ಅವರನ್ನು ವೇಶ್ಯಾವಾಟಿಕೆ (Prostitution) ಆರೋಪದ ಅಡಿ ದೆಹಲಿ ಪೊಲೀಸರು ಬಂಧಿಸಿದ್ದರು. ರೆಡ್ ಹ್ಯಾಂಡ್ ಆಗಿಯೇ ಆ ನಟಿ ಪೊಲೀಸರ ಬಲೆಗೆ ಬಿದ್ದಿದ್ದರು. ಇದೀಗ ಮುಂಬೈ (Mumbai) ಪೊಲೀಸರು ಮತ್ತೋರ್ವ ನಟಿಯನ್ನು ಇದೇ ಆರೋಪದಡಿ ಬಂಧಿಸಿದ್ದಾರೆ (arrested). ಈ ದಂಧೆಗೆ ನಟಿ ಮಾಡೆಲ್ ಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಭೋಜಪುರಿ (Bhojpuri) ನಟಿ ಸುಮನ್ ಕುಮಾರಿ (Suman Kumari) ಬಂಧಿತ ಆರೋಪಿಯಾಗಿದ್ದು, ಮುಂಬೈನ ಪೊಲೀಸ್ ಸೋಷಿಯಲ್ ಸರ್ವೀಸ್ ಶಾಖೆಯ ಅಧಿಕಾರಿಗಳು ಈಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮುಂಬೈನ ಗೋರೆಗಾಂವ್ ನ ಹೋಟೆಲ್ ವೊಂದರಲ್ಲಿ ಈ ನಟಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ
ತಮಗೆ ಖಚಿತವಾದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ದಾಳಿ ಮಾಡಿದ ಪೊಲೀಸರು ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ದಂಧೆಯ ಮುಖ್ಯ ಆರೋಪಿ ನಟಿ ಸುಮನ್ ಕುಮಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸಿನಿ ಜಗತ್ತಿಗೆ ಕನಸುಹೊತ್ತು ಬರುವ ನಟಿಯರೇ ಈಕೆಯ ಟಾರ್ಗೆಟ್ ಎಂದು ಹೇಳಲಾಗುತ್ತಿದ್ದು, ಒಂದು ಹುಡುಗಿಗೆ ಐವತ್ತು ಸಾವಿರದಿಂದ ಎಂಬತ್ತು ಸಾವಿರ ತನಕ ಚಾರ್ಜ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಪಂಜಾಬಿ, ಭೋಜಪುರಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಸುಮನ್ ಕುಮಾರಿ ನಟಿಸಿದ್ದು, ಹಲವು ಆಲ್ಬಂಗಳಲ್ಲೂ ಕಾಣಿಸಿಕೊಂಡಿದ್ದಾರೆ. ಲೈಲಾ ಮಜ್ನು, ಬೇಟಾ ದಸ್ ನಂಬರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಯುವಕನೊಬ್ಬನ ಸಹಾಯ ಪಡೆದುಕೊಂಡು ಈಕೆ ಅಡ್ಡದಾರಿ ಹಿಡಿದ್ದರು ಎಂದು ಹೇಳಲಾಗುತ್ತಿದೆ. ಆ ಯುವಕ ಸದ್ಯ ನಾಪತ್ತೆಯಾಗಿದ್ದಾನೆ.