ಬೆಂಗಳೂರು: ಯಶವಂತಪುರ ಫ್ಲೈಓವರ್ ಮೇಲೆ ಮತ್ತೊಂದು ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಕಾರಿನಲ್ಲಿದ್ದ ನಾಲ್ವರು ಕೂದಳೆಲೆ ಅಂತರದಿಂದ ಪಾರಾಗಿದ್ದಾರೆ. ಕಾರ್ಯಕ್ರಮ ಮುಗಿಸಿ ಸಂಜಯ್‌ನಗರದಿಂದ ರಾಜಾಜಿನಗರಕ್ಕೆ ಯುವಕರು ವಾಪಸ್ ಆಗುತ್ತಿದ್ದರು. ತಡರಾತ್ರಿ ಅಪಘಾತ ಸಂಭವಿಸಿದೆ.
ಕೆಎ 04ಎಂಟಿ 8618 ನಂಬರ್‌ನ ಕ್ರೇಟಾ ಕಾರು ಯಶವಂತಪುರ ಮಾರ್ಗವಾಗಿ ವೇಗವಾಗಿ ಬರುತ್ತಿತ್ತು. ಈ ವೇಳೆ ಕಾರು ಫ್ಲೈಓವರ್ ಮೇಲೆ ನಿಯಂತ್ರಣ ತಪ್ಪಿದೆ. ವೇಗವಾಗಿ ಡಿವೈಡರ್ ಹತ್ತಿ ಕಂಟ್ರೋಲ್ ತಪ್ಪಿ ಪಲ್ಟಿಯಾಗಿದೆ.
ಕೂಡಲೇ ಸ್ಥಳದಲ್ಲಿದ್ದ ಕೆಲ ಆಟೋ ಚಾಲಕರು ಕಾರಿನ ಒಳಗಿದ್ದ ಯುವಕರನ್ನ ಆಚೆ ಕರೆತಂದಿದ್ದಾರೆ. ಯುವಕರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ. ಯಶವಂತಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಳೆದ ಒಂದು ಒಂದೂವರೆ ತಿಂಗಳ ಹಿಂದಷ್ಟೇ ಇದೇ ಜಾಗದಲ್ಲಿ ಅಪಘಾತವಾಗಿ ಫ್ಲೈಓವರ್ ಮೇಲಿಂದ ಕಾರು ಕೆಳಗೆ ಬಿದ್ದು ಅಪಘಾತ ಸಂಭವಿಸಿತ್ತು. ಈ ವೇಳೆ ಒಬ್ಬರು ಮೃತಪಟ್ಟಿದ್ದರು.