ಬೀದರ್: ಬಸ್ ನಿಲ್ದಾಣದಲ್ಲಿ (Bus Stand) ಅನಾಮಧೇಯ ಸೂಟ್‌ಕೇಸ್ (Suitcase) ಪತ್ತೆಯಾಗಿದ್ದರಿಂದ ಸಾರ್ವಜನಿಕರು ಬಾಂಬ್ (Bomb) ಇದೆಯೆಂದು ಆಂತಗೊಂಡಿರುವ ಘಟನೆ ಬೀದರ್ (Bidar) ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅನಾಮಧೇಯ ವ್ಯಕ್ತಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸೂಟ್ ಕೇಸ್ ಬಿಟ್ಟು ಹೋಗಿದ್ದು, ಅದರಲ್ಲಿ ಬಾಂಬ್ ಇದೆಯಾ ಎಂದು ಪ್ರಯಾಣಿಕರು ಸ್ವಲ್ಪ ಸಮಯ ಆತಂಕದಲ್ಲೇ ಕಾಲ ಕಳೆದಿದ್ದಾರೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ತಕ್ಷಣವೇ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ನ್ಯೂಟೌನ್ ಪೊಲೀಸರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪತ್ತೆಯಾದ ಅನಾಮಧೇಯ ಸೂಟ್‌ಕೇಸ್ ತೀವ್ರ ತಪಾಸಣೆ ಮಾಡಿ, ಕೊನೆಗೆ ಭಯದಲ್ಲೇ ಸೂಟ್‌ಕೇಸ್ ತೆರೆದು ನೋಡಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ ತಾರಾಗೆ ಭಾರೀ ಮೆಚ್ಚುಗೆ
ಸೂಟ್‌ಕೇಸ್ ಓಪನ್ ಮಾಡಿದಾಗ ಅದರಲ್ಲಿ ಬಟ್ಟೆಗಳು ಮಾತ್ರವೇ ಪತ್ತೆಯಾಗಿವೆ. ಯಾವುದೇ ಸ್ಫೋಟಕ ವಸ್ತುಗಳ ಪತ್ತೆಯಾಗದ ಹಿನ್ನೆಲೆ ನ್ಯೂಟೌನ್ ಪೊಲೀಸರು ಹಾಗೂ ಸಾರ್ವಜನಿಕರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಊಬರ್ ಚಾಲಕನಿಂದ ಹಲ್ಲೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]