ಮೈಸೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣನ (Snehamayi krishna) ಹೆಸರಿಗೆ ಈಗ ಸೂಪರ್ ಪವರ್ ಬಂದಿದೆ. ಸ್ನೇಹಮಯಿ ಹೆಸರನ್ನು ಹೇಳಿಕೊಂಡು ಪೊಲೀಸರಿಗೆ ಅನಾಮಧೇಯ ಪತ್ರಗಳು ಹೋಗುತ್ತಿವೆ ಅನ್ನೋ ಆರೋಪ ಕೇಳಿಬಂದಿದೆ.
ಮೈಸೂರಿನ ಜಯಪುರ ಪೊಲೀಸ್ ಠಾಣೆಗೆ (Mysuru Jayapura Police) ಗಿರೀಶ್ ಎಂಬುವವರ ವಿರುದ್ಧ ದೂರು ಹೋಗಿದೆ. ಅಸಲಿಗೆ ಗಿರೀಶ್ ಯಾರು ಎಂಬುದೇ ಸ್ನೇಹಮಹಿ ಕೃಷ್ಣಗೆ ಗೊತ್ತಿಲ್ಲ. ವಿಚಾರಣೆ ಹೋದಾಗಲೇ ತಮ್ಮ ಹೆಸರು ದುರ್ಬಳಕೆಯಾಗಿರುವುದು ಸ್ನೇಹಮಹಿ ಕೃಷ್ಣಗೆ ಗೊತ್ತಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼಗೆ ಹೇಳಿಕೆ ನೀಡಿದ ಸ್ನೇಹಮಯಿ ಕೃಷ್ಣ, ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಪ್ರಶಿಕ್ಷಣಾರ್ಥಿಯ ಬಳಿ ಹಣ ಕೇಳಿದ ಬಗ್ಗೆ ದೂರು ಹೋಗಿದೆ. ಇದನ್ನೂ ಓದಿ: ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?
Advertisement
Advertisement
ಸಂಚಾರಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದರೆ ನನ್ನ ಹೆಸರು ಹೇಳಿ ಶುಲ್ಕ ಕಟ್ಟದೇ ಹೋಗುತ್ತಿದ್ದಾರೆ. ಮೈಸೂರಿನ ಅರ್ಜುನ್ ಗೂರುಜಿ ವಿರುದ್ಧವು ದೂರು ಹೋಗಿದೆ. ನನ್ನ ಹೆಸರನ್ನ ಯಾಕೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅವರ ವೈಯಕ್ತಿಕ ವಿಚಾರಕ್ಕೆ ನನಗೆ ಕೆಟ್ಟ ಹೆಸರು ತರುಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ಮಾಡುತ್ತಿರುವ ಸ್ನೇಹಮಯಿ ಹೆಸರು ಬಳಸಿಕೊಂಡರೆ ನಮ್ಮ ಕೆಲಸ ಆಗುತ್ತದೆ ಎಂದು ಜನ ತಿಳಿದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
Advertisement
Advertisement
ಒಳ್ಳೆತನಕ್ಕೆ ನನ್ನ ಹೆಸರು ಬಳಸಿಕೊಂಡು ಅದರಿಂದ ಸಮಾಜಕ್ಕೆ ಒಳ್ಳೆಯದಾದರೆ ತೊಂದರೆ ಇಲ್ಲ. ನಿಮ್ಮ ಬಳಿ ದಾಖಲೆಗಳಿದ್ರೆ ನನಗೆ ಕೊಡಿ ನಿಮ್ಮ ಪರ ನಾನು ಹೋರಾಟ ಮಾಡುತ್ತೇನೆ. ಆದ್ರೆ ನನ್ನ ಹೆಸರು ದುರ್ಬಳಕೆಯಾದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ʻಪಬ್ಲಿಕ್ ಟಿವಿʼ ಮೂಲಕ ಸ್ನೇಹಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಡುಪಿ| ಮರದ ದಿಮ್ಮಿಗೆ ಡಿಕ್ಕಿಯಾಗಿ ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ