-ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶ ಪಡೆದುಕೊಂಡಿರುವ ದೂರುದಾರ
ಮಂಗಳೂರು: ಧರ್ಮಸ್ಥಳದಲ್ಲಿ (Dharmastala) ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ವ್ಯಕ್ತಿಯನ್ನು ಎಸ್‌ಐಟಿ (SIT) ತಮ್ಮ ವಶದಲ್ಲಿಯೇ ಇರಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ನಿವಾಸಿ ಶ್ಯಾಮ ಸುಂದರ ಅವರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಎಸ್‌ಐಟಿಗೆ ಪತ್ರ ಬರೆದಿರುವ ಅವರು, ಅನಾಮಿಕ ವ್ಯಕ್ತಿ 13 ಸ್ಥಳಗಳನ್ನು ಈಗಾಗಲೇ ತೋರಿಸಿದ್ದಾನೆ. ಆತ ಗುರುತಿಸಿದ 12 ಸ್ಥಳಗಳಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಆರಂಭದಲ್ಲಿ ಅನಾಮಿಕ ವ್ಯಕ್ತಿ ತನ್ನ ವಕೀಲರ ಜೊತೆ ಮಂಗಳೂರಿನ (Mangaluru) ರೂಮ್‌ವೊಂದರಲ್ಲಿ ನೆಲೆಸಿರುವ ಬಗ್ಗೆ ಮಾಹಿತಿಯಿತ್ತು. ಆದರೆ ಕೆಲ ದಿನಗಳಿಂದ ಈ ಅನಾಮಿಕ ವ್ಯಕ್ತಿ ಉಜಿರೆಯ (Ujire) ಖಾಸಗಿ ವ್ಯಕ್ತಿಯೋರ್ವನ ಮನೆಯಲ್ಲಿ ಉಳಿದುಕೊಳ್ಳುವ ಬಗ್ಗೆ ಮಾಹಿತಿಯಿದೆ. ಇಷ್ಟು ಗಂಭೀರ ಪ್ರಕರಣದಲ್ಲಿ ಅನಾಮಿಕನನ್ನು ಎಸ್‌ಐಟಿ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಬೇಕಿತ್ತು. ಆದರೆ ವಕೀಲರು, ಖಾಸಗಿ ವ್ಯಕ್ತಿಗಳ ಬಳಿ ಬಿಟ್ಟರೆ ನಿಷ್ಪಕ್ಷಪಾತ ತನಿಖೆ ಹೇಗೆ ನಡೆಯಲು ಸಾಧ್ಯ? ಹೀಗಾಗಿ ಅನಾಮಿಕ ವ್ಯಕ್ತಿಯನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬೇಕು. ಜೊತೆಗೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಕೆ ಸುಧಾಕರ್ ಹೆಸರು ಬರೆದು ಕಾರು ಚಾಲಕ ಆತ್ಮಹತ್ಯೆ
ಮನವಿ ಪತ್ರಕ್ಕೆ ಎಸ್‌ಐಟಿ ಪತ್ರಿಕ್ರಿಯಿಸಿದ್ದು, ನಿಮ್ಮ ಅರ್ಜಿಯನ್ನು ಸ್ವೀಕರಿಸಿ ಪರಿಶೀಲಿಸುತ್ತೇವೆ. ಯಾವುದೇ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಅಥವಾ ದೂರನ್ನು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ಉಲ್ಲೇಖಿಸಿದೆ
ದೂರಿನಲ್ಲಿ ಏನಿದೆ?
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬಹಳಷ್ಟು ಕೊಲೆಗಳು ನಡೆದಿದ್ದು, ಸದರಿ ಪ್ರಕರಣಗಳಲ್ಲಿ ತಾನು ಕಳೇಬರೆಗಳನ್ನು ಹೂತಿರುತ್ತೇನೆ ಎಂದು ಅನಾಮಿಕ ವ್ಯಕ್ತಿಯೋರ್ವನು ಅಪಾದಿಸಿದಂತೆ ಮಾನ್ಯ ಸರ್ಕಾರದ ನಿರ್ದೇಶನದಲ್ಲಿ ರಚಿಸಲ್ಪಟ್ಟಿರುವ ವಿಶೇಷ ತನಿಖಾ ದಳವು ಅತ್ಯಂತ ಉತ್ತಮ ರೀತಿಯಲ್ಲಿ ಪಾರದರ್ಶಕವಾಗಿ ತನಿಖೆಯನ್ನು ಮಾಡುತ್ತಿದೆ. ಈ ಬಗ್ಗೆ ನಮ್ಮ ಅಭಿಮಾನಗಳನ್ನು ಸಲ್ಲಿಸುತ್ತಿದ್ದೇವೆ.
ಮೃತ ವ್ಯಕ್ತಿಗಳ ಕಳೇಬರಗಳನ್ನು ತಾನು ತೋರಿಸುವುದಾಗಿ ಹೇಳಿ ಅನಾಮಿಕ ವ್ಯಕ್ತಿಯು 13 ಸ್ಥಳಗಳನ್ನು ತೋರಿಸಿದ್ದು, ಮಾನ್ಯರಾದ ತಾವು ಈಗಾಗಲೇ 12 ಸ್ಥಳಗಳನ್ನು ತನಿಖೆಗೆ ಒಳಪಡಿಸಿರುತ್ತೀರಿ. ಹೀಗಿರುವಲ್ಲಿ ತಮಗೆ ಸ್ಥಳವನ್ನು ತೋರಿಸುತ್ತಿರುವ ಅನಾಮಿಕ ವ್ಯಕ್ತಿಯು ಪ್ರತಿನಿತ್ಯ ವಕೀಲರುಗಳು ಎಂದು ಕರೆಯಲ್ಪಡುವ ವ್ಯಕ್ತಿಗಳ ಜೊತೆ ಬರುತ್ತಿದ್ದು, ಅವರ ಜೊತೆ ಮಂಗಳೂರಿನಲ್ಲಿ ಹೋಗಿ ರೂಮ್‌ನಲ್ಲಿ ನೆಲೆಸುತ್ತಿದ್ದಾರೆ ಎಂದು ಮಾಧ್ಯಮಗಳಿಂದ ನಮಗೆ ತಿಳಿದುಬಂದಿರುತ್ತದೆ. ಅದಲ್ಲದೇ ಇತ್ತೀಚಿನ ಕೆಲವು ದಿನಗಳ ಹಿಂದೆ ಈ ಅನಾಮಿಕ ವ್ಯಕ್ತಿಯು ಉಜಿರೆಯಲ್ಲಿ ಖಾಸಗಿ ವ್ಯಕ್ತಿಯ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ನಮಗೆ ಮಾಧ್ಯಮಗಳಿಂದ ತಿಳಿದುಬಂದಿರುತ್ತದೆ.
ಇಷ್ಟು ಗಂಭೀರ ಪ್ರಕರಣದಲ್ಲಿ ಮಾಹಿತಿದಾರನಾದ ಅನಾಮಿಕನನ್ನು ತಮ್ಮ ಸುಪರ್ದಿಗೆಯಲ್ಲಿ ಇಡದೆ, ವಕೀಲರುಗಳ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಬಿಟ್ಟರೆ ನಿಷ್ಪಕ್ಷಪಾತವಾದ ತನಿಖೆಯು ಹೀಗೆ ನಡೆಯಲು ಸಾಧ್ಯ? ಆದುದರಿಂದ ದೂರುದಾರ ಅನಾಮಿಕ ವ್ಯಕ್ತಿಯನ್ನು ತಮ್ಮ ಸುಪರ್ದಿಯಲ್ಲಿಯೇ ಇರಿಸಿಕೊಂಡು ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆಯನ್ನು ತಾವು ಮಾಡಬೇಕೆಂದು ಈ ಮೂಲಕ ನಾವು ಪ್ರಾರ್ಥಿಸುತ್ತಿದ್ದೇವೆ.ಇದನ್ನೂ ಓದಿ: ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ
– ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶದಡಿಯಲ್ಲಿರುವ ದೂರುದಾರ
ಅನಾಮಿಕ ದೂರುದಾರ ವ್ಯಕ್ತಿ ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಜಿಲ್ಲಾ ನ್ಯಾಯಾಧೀಶರ ಕಮಿಟಿಯೂ ಕೂಡ ಈ ಅವಕಾಶವನ್ನು ಅಪ್ರೂವ್ ಮಾಡಿದೆ. ಈ ಅವಕಾಶದಡಿ ದೂರುದಾರ ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು. ಫೋನ್ ಬಳಕೆ ಮಾಡಬಹುದು, ಯಾರನ್ನು ಬೇಕಾದರೂ ಭೇಟಿಯಾಗಬಹುದು. ದೂರುದಾರನಿಗೆ ನಾಲ್ಕು ಮಂದಿ ಪೊಲೀಸರ ಭದ್ರತೆ ನೀಡಲಾಗಿದ್ದು, ಫೋನ್ ಡಿಟೇಲ್ಸ್ ಮತ್ತು ಭೇಟಿಯಾದವರ ಎಲ್ಲಾ ದಾಖಲೆಯನ್ನು ಪೊಲೀಸರು ಮಾನಿಟರಿಂಗ್ ಮಾಡುತ್ತಿರುತ್ತಾರೆ