DistrictsKarnatakaLatestLeading NewsMain PostUttara Kannada

ಕಾರವಾರ: ವರ್ಷಕ್ಕೊಮ್ಮೆ ದರ್ಶನ ನೀಡುವ ಸಾತೇರಿ ದೇವರ ಜಾತ್ರೆ ಆರಂಭ

- ನಾಳೆಯಿಂದ 5 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ

ಕಾರವಾರ: ವರ್ಷದಲ್ಲಿ 7 ದಿನಗಳು ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪ್ರಸಿದ್ಧ ಶ್ರೀ ಸಾತೇರಿ ದೇವರ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸೆಪ್ಟೆಂಬರ್ 5 ರಿಂದ 5 ದಿನಗಳ ಕಾಲ ಸಾರ್ವಜನಿಕರ ಸೇವೆ, ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸೆ.3ರ ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಮೊದಲ 2 ದಿನಗಳಲ್ಲಿ ಕುಳಾವಿ ಸಮುದಾಯದ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಂದ ಅಡಿಕೆ ಹಾಗೂ ಪುರುಷರಿಂದ ತಳಯ ಸಲ್ಲಿಸಲಾಗುತ್ತಿದೆ. ಸೆ.5 ರಿಂದ 9ರ ವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನ ಹಾಗೂ ಹರಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ನಮ್ಮ ಹೊಸ ಪಕ್ಷಕ್ಕೆ ಜಮ್ಮು-ಕಾಶ್ಮೀರದ ಜನರೇ ಹಿಂದೂಸ್ತಾನಿ ಹೆಸರಿಡಲಿ: ಆಜಾದ್‌

ಸೆ.5 ರಿಂದ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ 7 ಗಂಟೆಗೆ ವಿವಿಧ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಸೆ.5 ರಿಂದ 8ರ ವರೆಗೆ ಸದಾಶಿವಗಡದ ಓಂಕಾರ ಭಕ್ತಿ ಸಂಗೀತ ಮಂಡಳಿ, ಹಣಕೋಣದ ರಾಮದಾಸ ರಾಯ್ಕರ ಭಜನಾ ಮಂಡಳಿ, ಕಾಣಕೋಣ ಭಕ್ತಮಂಡಳಿ, ಮಾಜಾಳಿಯ ಸಂಕಟಮೋಚನ ಭಜನಾ ಮಂಡಳಿಗಳು ವಿವಿಧ ಭಜನಾ ಕಾರ್ಯಕ್ರಮ ನಡೆಸಿಕೊಡಲಿವೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಗ್ರೂಪ್‍ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

ಸೆ.9 ರಂದು ಮಧ್ಯಾಹ್ನದವರೆಗೆ ಶ್ರೀ ಸಾತೇರಿ ದೇವಿಯ ದರ್ಶನಕ್ಕೆ ಅವಕಾಶವಿರಲಿದ್ದು, ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Live Tv

Leave a Reply

Your email address will not be published. Required fields are marked *

Back to top button