ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಯನ್ನು (Valmiki Award 2024) ಘೋಷಣೆ ಮಾಡಿದ್ದು, ಐವರು ಸಾಧಕರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಗುರುವಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2024ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಇವರ ಸ್ಮರಣಾರ್ಥ ನೀಡುವ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಆಯ್ಕೆ ಮಾಡಲು ಕೆ. ಹೆಚ್.ಮ್ಲಲೇಶಪ್ಪ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಗಣ್ಯರನ್ನು ಗುರುತಿಸಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದನ್ನೂ ಓದಿ: Channapatna By Election| ಕಾದು ನೋಡುವ ತಂತ್ರಕ್ಕೆ ಮುಂದಾದ ಯೋಗೇಶ್ವರ್
Advertisement
Advertisement
ಗುರುವಾರ ನಡೆಯಲಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ. ಇದನ್ನೂ ಓದಿ: ಬೆನ್ನು ನೋವಿನ ಸಮಸ್ಯೆ – ಆರೋಪಿ ದರ್ಶನ್‌ಗೆ ಬಂತು ಮೆಡಿಕಲ್ ಬೆಡ್, ದಿಂಬು
Advertisement
Advertisement
ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದವರು:
ಕಿಲಾರೆ ಜೋಗಯ್ಯ – ಚಿತ್ರದುರ್ಗ (ಬುಡಕಟ್ಟು ಸಂಸ್ಕೃತಿ)
ಡಾ.ರತ್ನಮ್ಮ.ಎಸ್ – ಚಾಮರಾಜನಗರ (ಸಮಾಜ ಸೇವೆ)
ರಾಜಶೇಖರ ತಳವಾರ – ಬೆಳಗಾವಿ (ಸಾಮಾಜಿಕ ಕ್ಷೇತ್ರ)
ಕೆಎಸ್ ಮೃತ್ಯುಂಜಯ – ಬೆಂಗಳೂರು ಕೇಂದ್ರ (ಸಾಮಾಜಿಕ ಕ್ಷೇತ್ರ)
ರತ್ನಮ್ಮ ಬಿ ಸೋಗಿ – ಕಲಬುರಗಿ (ರಂಗಭೂಮಿ ಕ್ಷೇತ್ರ)