ಭುವನೇಶ್ವರ್: ಒಡಿಶಾ (Odisha) ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ದಿನ ಮುಟ್ಟಿನ ರಜೆಯನ್ನು ಘೋಷಣೆ ಮಾಡಿದೆ.
ಮಹಿಳೆಯರು ವಾರ್ಷಿಕವಾಗಿ ಪ್ರಸ್ತುತ ಪಡೆಯುವ 15 ದಿನಗಳ ಸಾಂದರ್ಭಿಕ ರಜೆ (CL) ಹೊರತಾಗಿ ವಾರ್ಷಿಕವಾಗಿ 12 ದಿನಗಳ ಹೆಚ್ಚುವರಿ ರಜೆ ಸಿಗಲಿದೆ ಎಂದು ಸಿಎಂ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದ ಹಂತಕರು
Advertisement
ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನದ ವೇತನ ಸಹಿತ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ ಎಂದು ಸ್ವಾತಂತ್ರ‍್ಯ ದಿನದಂದು ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಘೋಷಣೆಯನ್ನು ಮಾಡಿದ್ದರು. ಅದರನ್ವಯ ಸರ್ಕಾರ ಈಗ ಜಾರಿ ಮಾಡಿದೆ. ಇದನ್ನೂ ಓದಿ: ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಇದು ಸಾಧ್ಯತೆಯ ಕಲೆ: ಡಿಕೆ ಶಿವಕುಮಾರ್
Advertisement
Advertisement
ಹಿಂದಿನ ಬಿಜೆಡಿ ಸರ್ಕಾರವು ಕುಟುಂಬದ ಜವಾಬ್ದಾರಿಗಳು ಮತ್ತು ಮಹಿಳೆಯರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಷಿಸಿತ್ತು. ಈಗ, ಮಹಿಳೆಯರಿಗೆ ಸಿಎಲ್‌ಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ಆಪರೇಷನ್ ಆಲೌಟ್ ಜೆಡಿಎಸ್ – ಸಿಎಂ ಮುಂದೆ ಡಿಕೆಶಿ ಶಪಥ
Advertisement
ಒಡಿಶಾ ಸರ್ಕಾರದ ಎಲ್ಲಾ ಮಹಿಳಾ ಉದ್ಯೋಗಿಗಳು ಪ್ರಸ್ತುತ ಪಡೆಯುವ 15 ದಿನಗಳನ್ನು ಹೊರತುಪಡಿಸಿ ವಾರ್ಷಿಕವಾಗಿ ಹೆಚ್ಚುವರಿ ಸಿಎಲ್‌ಗಳನ್ನು ಪಡೆಯಬಹುದು ಎಂದು ಅಧಿಕೃತ ಟಿಪ್ಪಣಿಯಲ್ಲಿ ಸರ್ಕಾರ ಮಂಗಳವಾರ ತಿಳಿಸಿದೆ. ಈ ಕುರಿತು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ (Mohan Charan Majhi) ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕೋಲಾರ | ಎಂಜಿನಿಯರಿಂಗ್ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದ ರೈತನ 9 ಎಕರೆ ಬೆಳೆ ನಾಶ
ಈಗ, ಮಹಿಳಾ ಉದ್ಯೋಗಿಗಳಿಗೆ ಸಿಎಲ್‌ಗಳ ಸಂಖ್ಯೆ 27 ದಿನಗಳಾಗಿದ್ದು, ಪುರುಷರು 15 ದಿನಗಳ ಸಿಎಲ್ ಅರ್ಹರಾಗಿರುತ್ತಾರೆ. ಇದನ್ನೂ ಓದಿ: ಧಾರವಾಡ| ನದಿಯಲ್ಲಿ ಕೊಚ್ಚಿ ಹೋಯ್ತು ಕಾರು- ಮರ ಏರಿದ್ದ ಚಾಲಕನ ರಕ್ಷಣೆ