ವಾಷಿಂಗ್ಟನ್: ಅಮೆರಿಕದ (America) ಫೀನಿಕ್ಸ್ ಮಹಾನಗರದಲ್ಲಿರುವ ಕೃಷ್ಣಮಂದಿರದಲ್ಲಿ (Krishna Mandir) ಪ್ರಧಾನಿ ಮೋದಿ ಹೆಸರಲ್ಲಿ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ (Annamalai) ಪೂಜೆ ಸಲ್ಲಿಸಿದ್ದಾರೆ.
Shri K Annamalai performed archana seva in the name of Hon’ble @PMOIndia Shri @narendramodi -ji & prayed to Sri Srinivasa Devaru for the well being of 140+ Cr Indians during his visit. https://t.co/QEcV7LBafQ pic.twitter.com/UURPgTZyTw
— SriPuthigeMatha (@PuthigeSri) April 28, 2025
ಅಮೆರಿಕದಲ್ಲಿರುವ ಉಡುಪಿಯ ಪುತ್ತಿಗೆ ಮಠದ ಶ್ರೀ ಕೃಷ್ಣ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ದೇಶದ ಹೆಸರಲ್ಲಿ ಪೂಜೆ ಸಲ್ಲಿಸಿದ ಅಣ್ಣಾಮಲೈ, ಪಹಲ್ಗಾಮ್ ಘಟನೆ ನಂತರ ದೇಶದ ಸೈನ್ಯಕ್ಕೆ ಶಕ್ತಿ ತುಂಬಲು ಪ್ರಾರ್ಥನೆ ಮಾಡಿದ್ದಾರೆ. ಅಣ್ಣಾಮಲೈ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಲು ತೆರಳಿದ್ದರು. ಈ ವೇಳೆ ಕಾರ್ಯಕ್ರಮ ಸಂಯೋಜಕರ ಬಳಿ ಮಾಹಿತಿ ಪಡೆದು ಕೃಷ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಪಾಕ್ ರಕ್ಷಣಾ ಸಚಿವರ ಬಾಯಿ ಬಂದ್!
ಭೇಟಿ ವೇಳೆ ದೇವಾಲಯದ ವಾಸ್ತುಶಿಲ್ಪ ಹಾಗೂ ಪೂಜಾ ಶೈಲಿಯನ್ನು ಅಣ್ಣಾಮಲೈ ಕೊಂಡಾಡಿದ್ದಾರೆ. ಈ ಸಂದರ್ಭ ನೂರಾರು ಭಾರತೀಯರು ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ಅಣ್ಣಾಮಲೈ ಪ್ರಸಾದ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ – ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್ ಕದ್ದಿದ್ದ ಖದೀಮರ ಬಂಧನ