ಬೆಂಗಳೂರು: ನಗರದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲ್ಲ ಎಂದು ಸರ್ಕಾರ ಹೇಳಿದೆ.
ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರಿತ್ತು. ವರ್ಗಾವಣೆಯಾದ ಬಳಿಕ ಅವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಹೀಗಾಗಿ ಅಣ್ಣಾಮಲೈ ವರ್ಗಾವಣೆ ವಿಚಾರದ ಚರ್ಚೆಗೆ ಗ್ರಾಸವಾಗಿತ್ತು.
Advertisement
ಚರ್ಚೆಯಾದ ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಅಣ್ಣಾಮಲೈ ವರ್ಗಾವಣೆಯನ್ನು ರದ್ದು ಮಾಡಿದೆ. ಅಧಿಕಾರಿಗಳ ಹೆಸರನ್ನು ಟೈಪ್ ಮಾಡುವ ವೇಳೆ ಸಿಬ್ಬಂದಿ ಎಡವಟ್ಟಿನಿಂದಾಗಿ ಅಣ್ಣಾಮಲೈ ಹೆಸರು ನಮೂದಾಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಸಿಲಿಕಾನ್ ಸಿಟಿಯಲ್ಲಿ ಭೂ ಮಾಫಿಯಾ ಮಟ್ಟಹಾಕಲು ಸರ್ಕಾರ ಚಿಕ್ಕಮಗಳೂರಿನಲ್ಲಿ ಎಸ್‍ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಸಿತ್ತು.
Advertisement
ಕಳೆದ ತಿಂಗಳು ಜನವರಿಯಲ್ಲಿ ಅಣ್ಣಾಮಲೈ ಅವರು ಬೆಳ್ಳಂಬೆಳಗ್ಗೆ ರೌಡಿಶೀಟರ್‍ಗಳ ಮನೆ ಮೇಲೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದರು. ಕೋಣನಕುಂಟೆ, ಸುಬ್ರಮಣ್ಯಪುರ, ಕುಮಾರಸ್ವಾಮಿ ಲೇಔಟ್, ತಲ್ಲಘಟ್ಟಪುರ ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಮಾರಕಾಸ್ತ್ರಗಳು ಹಾಗೂ ದಾಖಲೆ ಇಲ್ಲದ ನೂರಾರು ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದರು. ರೌಡಿಗಳು ಕೊಲೆ, ಕೊಲೆ ಯತ್ನ, ರಾಬರಿ, ಡಕಾಯಿತಿ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ದಾಳಿ ನಡೆಸಿದ ಬಳಿಕ ಅಣ್ಣಾಮಲೈ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv