ಬೆಂಗಳೂರು: ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಅಭಿಮಾನಿಗಳಿಗೆ ತಮ್ಮ ನಂದುವನ್ನು ಪರಿಚಯಿಸಿದ್ದಾರೆ.
ಅಣ್ಣಾಮಲೈ ಅವರು ತಮ್ಮ ಟ್ವಿಟ್ಟರಿನಲ್ಲಿ ಗೂಳಿ ಫೋಟೋವನ್ನು ಹಾಕಿ ಅದಕ್ಕೆ, “ನನ್ನ ಹೆಸರು ನಂದು. ನಾನು 700 ಕೆಜಿ ಮತ್ತು 6 ಅಡಿ ಇದ್ದೇನೆ. ನಾನು ಉಗ್ರ, ಅಸಹ್ಯ, ಯಾವಾಗಲೂ ಕಾಲು ಕೆರಳಿಕೊಂಡು ಜಗಳಕ್ಕೆ ಹೋಗುತ್ತೇನೆ. ರೈತರ ಹಾಗೂ ನ್ಯಾಯದ ರಕ್ಷಕ. ಅದಕ್ಕಿಂತ ಹೆಚ್ಚಾಗಿ ನಾನು ತಮಿಳು ಹಾಗೂ ಭಾರತೀಯ ಹೆಮ್ಮೆಯಾಗಿ ನಿಲ್ಲುತ್ತೇನೆ. ಹೌದು. ನಾನು ಪ್ರಸಿದ್ಧ ಹಾಗೂ ಎಲ್ಲವನ್ನು ಜಯಿಸುವ ಕಂಗೇಯಂ ಗೂಳಿ. ನೀವು ತಮಿಳು ನಾಡಿಗೆ ಬಂದಾಗ ನನ್ನನ್ನು ನೋಡಲು ಬನ್ನಿ” ಎಂದು ಟ್ವೀಟ್ ಮಾಡಿದ್ದಾರೆ.
Advertisement
My name is Nandu. Im 700 KG and 6 feet. I’m ferocious, unwieldy, always itching for a fight, protector of farmers & justice and above that I stand for Tamil and Indian pride. Yes, I’m the famed and all conquering Kangeyam Bull! Come witness me when you come to Tamil Nadu pic.twitter.com/Aj7ZToCNJz
— K.Annamalai (@annamalai_k) September 14, 2019
Advertisement
ತಮಿಳುನಾಡಿನ ಕೊಯಮತ್ತೂರಿನವಾರದ ಅಣ್ಣಾಮಲೈ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಪ್ರತಿಷ್ಠಿತ ಲಖನೌ ಎಂಬಿಎ ಪದವೀಧರರಾಗಿದ್ದಾರೆ. ಅಣ್ಣಾಮಲೈ ಐಪಿಎಸ್ ಅಧಿಕಾರಿ ಆಗುವ ಮೊದಲು ವಿದ್ಯಾರ್ಥಿಯಾಗಿ ಪಾಲಿಟಿಕ್ಸ್ ನಲ್ಲಿದ್ದರು. ಅಣ್ಣಾಮಲೈ ಅವರು ತಮ್ಮ 9 ವರ್ಷದ ಐಪಿಎಸ್ ಹುದ್ದೆಗೆ ಇದೇ ವರ್ಷ ಜೂನ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು.
Advertisement
#NewProfilePic pic.twitter.com/zXqcB3wj7D
— K.Annamalai (@annamalai_k) September 14, 2019
Advertisement
ಅಣ್ಣಾಮಲೈ ಅವರು 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ನಂತರ 2013ರಲ್ಲಿ ಕಾರ್ಕಳ ಎಎಸ್‍ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಅವರು, ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್‍ಪಿ, ಚಿಕ್ಕಮಗಳೂರು ಎಸ್‍ಪಿಯಾಗಿ ದಕ್ಷ ಸೇವೆ ಮಾಡಿದ್ದಾರೆ.