ಬೆಂಗಳೂರು: ಅನ್ನಭಾಗ್ಯ ಯೋಜನೆ (Annabhagya Scheme) ನಾಳೆಯಿಂದಲೇ ಜಾರಿಯಾಗಲಿದೆ. 5 ಅಕ್ಕಿ ನೀಡಲಾಗುವುದು, ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಜನರ ಬ್ಯಾಂಕ್ ಖಾತೆಗೆ ಹಾಕಲು ಹಣ ಕೂಡ ರೆಡಿ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ (KH Muniappa) ಹೇಳಿದ್ದಾರೆ.
Advertisement
ಬ್ಯಾಂಕ್ ಖಾತೆ ಮಾಡಿಸಿಕೊಳ್ಳಿ:
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆಯಿಂದಲೇ ಜನರ ಬ್ಯಾಂಕ್ ಖಾತೆಗೆ ಹಾಕಲು ಹಣ ರೆಡಿಯಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂ.ನಂತೆ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿಯ ಹಣ ಸಿಗುತ್ತೆ. ಒಂದು ಮನೆಯಲ್ಲಿ 5 ಸದಸ್ಯರು ಇದ್ದರೆ, ಪ್ರತಿ ಕೆಜಿಗೆ 34 ರೂ.ನಂತೆ 25 ಕೆಜಿಗೆ 850 ರೂ. ಸಿಗುತ್ತದೆ. ಅಕ್ಕಿ ಕೊಡುವವರೆಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಅಕ್ಕಿ ಸಿಕ್ಕ ಕೂಡಲೇ ಕೊಡುವ ವ್ಯವಸ್ಥೆ ಮಾಡುತ್ತೇವೆ. ರೇಷನ್ ಕಾರ್ಡ್ ಪ್ರಕಾರ ಯಾರು ಮುಖ್ಯಸ್ಥರಿದ್ದಾರೋ ಅವರ ಅಕೌಂಟ್‌ಗೆ ಹಣ ಹಾಕುತ್ತೇವೆ. ಬಹುತೇಕ ಮಂದಿ ಬ್ಯಾಂಕ್ ಖಾತೆ (BankAccount) ಹೊಂದಿದ್ದಾರೆ. ಇಲ್ಲದವರು ತಕ್ಷಣ ಬ್ಯಾಂಕ್ ಖಾತೆ ಮಾಡಿಸಿಕೊಂಡರೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ರಾಗಿ/ಜೋಳ ಧಾನ್ಯ ಕೊಡುತ್ತೇವೆ:
ಮುಂದುವರಿದು ಮಾತನಾಡಿ, ಈಗಾಗಲೇ ಸಿಎಂ ಕೂಡ ಅಕ್ಕಿ ಜೊತೆಗೆ ಧಾನ್ಯ ಕೊಡುತ್ತೇವೆ ಎಂದು ಹೇಳಿದ್ದಾರೆ. ದಕ್ಷಿಣ ಭಾಗದ ಜನರಿಗೆ ರಾಗಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನಾಗಿದ್ದು, ಜೋಳ ಸಂಗ್ರಹಿಸಲಾಗುತ್ತಿದೆ. ದಾಸ್ತಾನು ಆದ ಕೂಡಲೇ ಧಾನ್ಯಗಳ ಹಂಚಿಕೆ ಮಾಡುತ್ತೇವೆ. ಹಣ ಸಿದ್ಧತೆ ಮಾಡಿಕೊಂಡಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತೆ. ನಾಳೆಯಿಂದಲೇ ಯೋಜನೆ ಜಾರಿಗೆ ಬರುತ್ತೆ. ಅನ್ನಭಾಗ್ಯ ಯೋಜನೆಗೆ ಸಮಾವೇಶದ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
Advertisement
ಕೇಂದ್ರ ಅಕ್ಕಿ ಕೊಟ್ರೆ ಹಂಚುತ್ತೇವೆ:
ಎಂಎಸ್‌ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ, ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. 8 ಕೆಜಿ ಅಕ್ಕಿ ಕೊಡುತ್ತೇವೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಈಗ ಅಕ್ಕಿ ಬದಲು ಹಣ ವರ್ಗಾವಣೆ ಮಾಡುತ್ತೇವೆ. ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ರೆ, ಅಕ್ಕಿಯನ್ನೇ ಹಂಚಿಕೆ ಮಾಡುತ್ತೇವೆ. ಇಲ್ಲವೇ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Web Stories