ರಾಯಚೂರು: ಕಾಂಗ್ರೆಸ್ ಗ್ಯಾರೆಂಟಿಗಳಲ್ಲೊಂದಾದ ಉಚಿತ 10 ಕೆ.ಜಿ ಅಕ್ಕಿ (Rice) ವಿತರಣೆಯ ಅನ್ನಭಾಗ್ಯ ಯೋಜನೆಗೆ ಎಲ್ಲೂ ಅಕ್ಕಿಯೇ ಸಿಗುತ್ತಿಲ್ಲ. ಹೀಗಾಗಿ ರಾಯಚೂರಿನ ರೈತರು ಸಿಎಂಗೆ ಸಲಹೆ ನೀಡಿದ್ದಾರೆ. ರೈಸ್ ಮಿಲ್ಲರ್ಸ್ ಕೂಡ ಕೈ ಜೋಡಿಸಲು ಸಜ್ಜಾಗಿದ್ದಾರೆ. ರಾಜ್ಯದ ರೈತರಿಂದ ಅಕ್ಕಿ ಖರೀದಿಸಲು ಹಿಂದೇಟು ಹಾಕುತ್ತಿರುವ ಸಿಎಂ ಸಿದ್ದರಾಮಯ್ಯಗೆ ರೈತರು ಸಲಹೆ ನೀಡಿದ್ದಾರೆ.
Advertisement
ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ (Congress Guarantee) ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನ ಘೋಷಿಸಿ ಜನ ಮನ್ನಣೆಯನ್ನೇನೋ ಪಡೆದು ರಾಜ್ಯದಲ್ಲಿ ಅಧಿಕಾರವನ್ನ ಹಿಡಿದಿದೆ. ಆದರೆ ಗ್ಯಾರಂಟಿಗಳಲ್ಲೊಂದಾದ ಉಚಿತ 10 ಕೆ.ಜಿ. ಅಕ್ಕಿ ವಿತರಣೆಯ ಅನ್ನಭಾಗ್ಯ (AnnaBhagya) ಯೋಜನೆ ಜಾರಿಗೆ ಅಕ್ಕಿಯೇ ಸಿಗುತ್ತಿಲ್ಲ. ಕಾರಣ ಈಗ ಭತ್ತದ ಸೀಜನ್ ಮುಗಿದು ಹೋಗಿದೆ. ಅನ್‍ಸೀಜನ್ ಇರುವುದರಿಂದ ಯಾವ ರಾಜ್ಯದಿಂದಲೂ ಅಗತ್ಯ ಪ್ರಮಾಣದ ಅಕ್ಕಿ ಸಿಗುತ್ತಿಲ್ಲ.
Advertisement
Advertisement
ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲು ಸಿಎಂ ಸಿದ್ದರಾಮಯ್ಯ ಶ್ರಮಿಸ್ತಿದ್ದಾರೆ. ಆದರೆ ಈವರೆಗೂ ಅಗತ್ಯವಿರುವಷ್ಟು ಪ್ರಮಾಣದ ಅಕ್ಕಿಯನ್ನು ಖರೀದಿಸಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ರಾಜ್ಯದ ಮಾರುಕಟ್ಟೆಯಲ್ಲಿ ಅಗತ್ಯವಿರುವಷ್ಟು ಅಕ್ಕಿ ಇಲ್ಲ. ರಾಯಚೂರಿನ ಸೋನಾ ಮಸೂರಿ ದುಬಾರಿ, ಖರೀದಿಸಲಾಗಲ್ಲ ಎಂದಿದ್ದಾರೆ. ಬಿಜೆಪಿಯವರು ಮಾತ್ರ, ಗೊಂದಲ ಸೃಷ್ಟಿಸೋದನ್ನು ಬಿಟ್ಟು ಕೊಟ್ಟ ಮಾತಿನಂತೆ ಅಕ್ಕಿ ಕೊಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯದ ರೈತರಿಂದ ಅಕ್ಕಿ ಖರೀದಿಸಿ ನೀಡಲಿ. ಅದು ಬಿಟ್ಟು ಬಿಜೆಪಿಯವರೇ ಕೊಡಿಸಿ ಎನ್ನುವುದು ಸರಿಯಲ್ಲ ಎಂದು ತಿರಗೇಟು ನೀಡಿದ್ದಾರೆ.
Advertisement
ಭತ್ತದ ಕಣಜವಾದ ತುಂಗಭದ್ರಾ ತೀರದ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯಿಂದಲೂ ಈಗ ಹೇಳಿಕೊಳ್ಳುವಷ್ಟು ಪ್ರಮಾಣದ ಭತ್ತ ಸಿಗುವುದಿಲ್ಲ. ಹೀಗಾಗಿ ಈ ವರ್ಷ 10 ಕೆ.ಜಿ ಬದಲಾಗಿ ಕಡಿಮೆ ಪ್ರಮಾಣದ ಅಕ್ಕಿಯನ್ನ ಕೊಟ್ಟು ರಾಗಿ, ಸಜ್ಜೆ, ಜೋಳವನ್ನ ನೀಡುವ ಮೂಲಕ ಆಯಾ ಭಾಗದ ರೈತರನ್ನ ಪೆÇ್ರೀತ್ಸಾಹಿಸಲಿ ಅಂತ ರೈತರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿಗಳನ್ನ ತಂದಿದೆ: ದಿನೇಶ್ ಗುಂಡೂರಾವ್
ಛತ್ತೀಸ್‍ಗಢದಿಂದ ಅಕ್ಕಿ ಖರೀದಿಸಿ ತರಲು ಕ್ವಿಂಟಾಲ್ ಅಕ್ಕಿಗೆ 3,800 ರೂ. ಹಾಗೂ ಲಾರಿ ಬಾಡಿಗೆ ಕ್ವಿಂಟಾಲ್‍ಗೆ 350 ರೂ. ಒಟ್ಟು ಕ್ವಿಂಟಾಲ್ ಅಕ್ಕಿಗೆ 4,150 ರೂ ತಗುಲುತ್ತಿದ್ದು ಸರ್ಕಾರಕ್ಕೆ ದುಬಾರಿಯಾಗುತ್ತದೆ. ಅದೇ ರಾಜ್ಯದಲ್ಲಿ ಭತ್ತ ಖರೀದಿಸಿ ಅಕ್ಕಿ ಮಾಡಿ ಸರಬರಾಜು ಮಾಡುವುದಾದರೆ ಕ್ವಿಂಟಾಲ್ ಅಕ್ಕಿಗೆ 3,400 ರೂ. ವರೆಗೆ ವೆಚ್ಚ ತಗುಲುತ್ತದೆ. ಈಗಾಗಲೇ ಎರಡು ವರ್ಷದ ಕೆಳಗೆ ಎರಡೂವರೆ ಲಕ್ಷ ರೂ. ಹಣ ಕಟ್ಟಿ ಲೈಸೆನ್ಸ್ ಪಡೆದರೂ ಭತ್ತ ಮಿಲ್‍ಗಳಿಗೆ ಬರಲಿಲ್ಲ. ಈ ಬಾರಿ ಭತ್ತ ಕಳುಹಿಸಿದರೆ ಅಕ್ಕಿ ಮಾಡಿಕೊಡಲು ಸಿದ್ಧರಿದ್ದೇವೆ ಅಂತ ಅಕ್ಕಿ ಗಿರಣಿ ಮಾಲೀಕರು ಹೇಳಿದ್ದಾರೆ.
ಒಟ್ಟಿನಲ್ಲಿ ಕೊಟ್ಟ ಭರವಸೆಯಂತೆ 10 ಕೆ.ಜಿ ಅಕ್ಕಿಯನ್ನ ನೀಡುತ್ತೇವೆ ಅಂತ ಸರ್ಕಾರ ಹೇಳುತ್ತಿದೆ. ರೈತರು ಹಾಗೂ ಅಕ್ಕಿ ಗಿರಣಿ ಮಾಲೀಕರು ರಾಜ್ಯದ ಬಂಡವಾಳ ನಮ್ಮ ರಾಜ್ಯದಲ್ಲೇ ವಿನಿಯೋಗವಾಗಲಿ. ಇದರಿಂದ ಸರ್ಕಾರಕ್ಕೆ ಹೊರೆ ಕಡಿಮೆಯಾಗುತ್ತೆ ರೈತರ ಉತ್ಪನ್ನಕ್ಕೆ ಡಿಮ್ಯಾಂಡ್ ಹೆಚ್ಚಾಗುತ್ತೆ ಅಂತಿದ್ದಾರೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ನೋಡಬೇಕಿದೆ.