ನವದೆಹಲಿ: ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲೇರಿದ ಹಾಗೆ ತೋರುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕಿಡಿಕಾರಿದರು.
ಭ್ರಷ್ಟಾಚಾರ ಪ್ರಕರಣದ ನಂತರ ಸರ್ಕಾರ ಜಾರಿಗೆ ತಂದ ಸರ್ಕಾರಿ ಮದ್ಯದ ಪರವಾನಗಿ ನೀತಿಯ ಕುರಿತು ದೆಹಲಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
Advertisement
Advertisement
ಪತ್ರದಲ್ಲಿ ಏನಿದೆ?: ನೀವು ಮುಖ್ಯಮಂತ್ರಿಯಾದ ನಂತರ ನಾನು ನಿಮಗೆ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಸರ್ಕಾರದ ಮದ್ಯ ನೀತಿಯ ಬಗ್ಗೆ ಇತ್ತೀಚೆಗೆ ವರದಿಗಳಿಂದ ನೋವಾಗಿದೆ ಎಂದು ತಿಳಿಸಿದ್ದಾರೆ.
Advertisement
Anna Hazare writes to Delhi CM Kejriwal over New Liquor Policy
“Had expected a similar policy(like Maharashtra’s). But you didn’t do it.People seem to be trapped in a circle of money for power&power for money. It doesn’t suit a party that emerged from a major movement,”he writes pic.twitter.com/4yTvc0XI5K
— ANI (@ANI) August 30, 2022
Advertisement
ನೀವು ಬರೆದಿರುವ ಪುಸ್ತಕದಲ್ಲಿ ಪ್ರದೇಶದ ನಿವಾಸಿಗಳ ಅನುಮೋದನೆಯಿಲ್ಲದೇ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯಬಾರದು ಎಂದು ತಿಳಿಸಿದ್ದೀರಿ. ಆದರೆ ಇದೀಗ ನೀವು ಮುಖ್ಯಮಂತ್ರಿಯಾದ ನಂತರ ಈ ಎಲ್ಲಾ ಆದರ್ಶಗಳನ್ನು ಮರೆತಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೋದಿ, ಬಿಜೆಪಿಯವರು ಸೇರಿ ದೇಶವನ್ನ ಬರ್ಬಾದು ಮಾಡಿಬಿಟ್ರು – ಸಿದ್ದು ಗುದ್ದು
ನೀವು, ಮನೀಶ್ ಸಿಸೋಡಿಯಾ ಹಾಗೂ ಇತರರು ರಚಿಸಿದ ಆಮ್ ಆದ್ಮಿ ಪಕ್ಷವು ಈಗ ಯಾವುದೇ ಪಕ್ಷಕ್ಕಿಂತ ಭಿನ್ನವಾಗಿಲ್ಲ. ಸದೃಢವಾದ ಲೋಕಪಾಲ್ ಮತ್ತು ಭ್ರಷ್ಟಾಚಾರ-ವಿರೋಧಿ ಕಾನೂನುಗಳನ್ನು ತರುವ ಬದಲು, ನೀವು ಈ ಮದ್ಯದ ನೀತಿಯನ್ನು ತಂದಿದ್ದೀರಿ. ಅದು ಜನವಿರೋಧಿ, ವಿಶೇಷವಾಗಿ ಮಹಿಳಾ ವಿರೋಧಿಯಾಗಿದೆ ಎಂದು ತಿಳಿಸಿದರು.
ದೆಹಲಿ ಸರ್ಕಾರದ ಅಬಕಾರಿ ಖಾತೆಯನ್ನು ನಿರ್ವಹಿಸುತ್ತಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಎಫ್‍ಐಆರ್‍ನಲ್ಲಿ ಹೆಸರಿಸಲಾದ 15 ಆರೋಪಿಗಳಲ್ಲಿ ಒಬ್ಬರಾಗಿದ್ದರು. ಇದನ್ನೂ ಓದಿ: ಯಥಾಸ್ಥಿತಿ ಕಾಪಾಡಿ – ಈದ್ಗಾ ಮೈದಾನದಲ್ಲಿ ಗಣೋಶೋತ್ಸವ ಆಚರಣೆ ಇಲ್ಲ