ದಾವಣಗೆರೆ: ಆಂಜನೇಯನ ಜನ್ಮಭೂಮಿ ಹೈಜಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.
ಶ್ರೀ ಆಂಜನೇಯ ಜನ್ಮಭೂಮಿ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾವತಿಯ ಕಿಷ್ಕಿಂದೆ ಆಂಜನಾದ್ರಿ ಬೆಟ್ಟವೇ ಹನುಮನ ನಿಜವಾದ ಜನ್ಮಭೂಮಿ. ತಿರುಪತಿಯಲ್ಲಿ ವಿನಾಕರಣ ವಿವಾದ ಸೃಷ್ಠಿ ಮಾಡಲಾಗುತ್ತಿದೆ. ಆಂಜನೇಯನ ಜನ್ಮಭೂಮಿಯನ್ನೆ ಹೈಜಾಕ್ ಮಾಡಲಾಗುತ್ತಿದೆ. ಕೋಟ್ಯಂತರ ಭಕ್ತರ ಭಾವನೆಯ ಪ್ರಶ್ನೆ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ
Advertisement
Advertisement
ಪ್ರಧಾನಿ ಮೋದಿ ಅವರ ಶ್ರೀಮತಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದಾರೆ. ರಾಮ ಜನ್ಮಭೂಮಿ ಬಗ್ಗೆ ತಲೆಕೆಡಿಸಿಕೊಂಡಿದ್ದ ಬಿಜೆಪಿ ಇಲ್ಲಿ ಯಾಕೆ ಮೌನ ವಹಿಸಿದೆ. ಯಾಕೆ RSS ಕೇಂದ್ರ, ರಾಜ್ಯ ಸರ್ಕಾರ ಖಂಡಿಸುತ್ತಿಲ್ಲ? ಸುಮ್ಮನಿದ್ದರೆ ಒಪ್ಪಿಕೊಂಡಂತೆ ಅಲ್ವಾ ಎಂದು ವ್ಯಂಗ್ಯವಾಡಿದರು.
Advertisement
ನಾವು ಬಿಜೆಪಿ ಅವರ ತರ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಭಕ್ತಿ ಮತ್ತು ಶ್ರದ್ಧೆಯ ಪ್ರತೀಕ ಆಂಜನೇಯ. ಆಂಜನೇಯನ ನೈಜ ಜನ್ಮಭೂಮಿ ಅಭಿವೃದ್ಧಿ ಮಾಡುವ ಕೆಲಸ ಎಲ್ಲರಿಂದ ಆಗಲಿ. ತಿರುಪತಿಗೆ ಆಂಜನೇಯ ಬಂದು ಹೋಗಿರಬಹುದು. ಆದರೆ ನಿಜವಾದ ಹುಟ್ಟು ಕರ್ನಾಟಕದ ಕಿಷ್ಕಿಂದೆಯಲ್ಲಿದೆ. ಈ ಹಿನ್ನೆಲೆ ಗಂಗಾವತಿಯ ಆಂಜನಾದ್ರಿಬೆಟ್ಟ ಅಭಿವೃದ್ಧಿಪಡಿಸಲಿ ಎಂದು ಆಗ್ರಹಿಸಿದರು.
Advertisement
ರಾಷ್ಟ್ರದಲ್ಲಿ ರಾಮ ಜನ್ಮಭೂಮಿ ಬಗ್ಗೆ ವಾದ ನಡೀತಾ ಇದೆ. ಸಂಘರ್ಷದ ಬಳಿಕ ರಾಮಮಂದಿರ ಕಟ್ಟಲಾಗ್ತಿದೆ. ಇಡೀ ವಿಶ್ವಕ್ಕೆ ರಾಮನ ಪರಿಚಯ ಮಾಡಿದ್ದು ಮಹರ್ಷಿ ವಾಲ್ಮೀಕಿ. ಆದರೆ ವಾಲ್ಮೀಕಿಯನ್ನು ಆಧುನಿಕ ರಾಮಭಕ್ತರು ಮರೆತಿದ್ದಾರೆ. ತಲಕಾವೇರಿಯಿಂದ ಹಿಡಿದು ಪಶ್ಚಿಮ ಘಟ್ಟಗಳಲ್ಲಿ 4 ಸಾವಿರ ಟಿಎಂಸಿ ನೀರು ಪ್ರಕೃತಿದತ್ತವಾಗಿ ಶೇಖರಣೆಯಾಗುತ್ತದೆ. ಇಲ್ಲಿಯವರೆಗೂ ಬಳಕೆಯಾಗುವ ನೀರು 2 ಸಾವಿರ ಟಿಎಂಸಿ ನೀರು ಮಾತ್ರ. ಉಳಿದ 2 ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಅನೌನ್ಸ್ ಮಾಡುತ್ತಾರೆ. ನದಿಗಳ ಜೋಡಣೆ ಮಾಡುತ್ತೇವೆ. ದಕ್ಷಿಣ ಭಾರತದ ನದಿಜೋಡಣೆ ಮಾಡಲು ಹೋಗಿದ್ದಾರೆ. ಇಲ್ಲಿ ಯಾರು ಕೂಡ ಕೇಳಿಲ್ಲ, ಎಷ್ಟು ನೀರು ಇದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಎಲ್ಲ ನೀರನ್ನು ಪೆನ್ನಾರ್‍ನಲ್ಲಿ ತಂದು ಬಿಡುತ್ತಾರಂತೆ. ಕರ್ನಾಟಕವನ್ನು ನೀರಿನ ವಿಚಾರವಾಗಿ ಏನು ಬೇಕಾದರೂ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿದಿದೆ. ಯಾರ ಅಭಿಪ್ರಾಯ ಸಂಗ್ರಹಿಸದೆ ನದಿ ಜೋಡಣೆಗೆ ಕೈ ಹಾಕಿದ್ದಾರೆ ಎಂದರು. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ
ಇದು ಏನಾದ್ರು ಜಾರಿಯಾದರೆ ಕರ್ನಾಟಕಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಲಾಭ ಆಗುವುದು ತಮಿಳುನಾಡು ಹಾಗೂ ಆಂಧ್ರಕ್ಕೆ ಮಾತ್ರ. ಕರ್ನಾಟಕದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಇವೆ ಅದನ್ನು ಬಿಟ್ಟಿದ್ದಾರೆ. ಈಗ ಇರುವ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಪಡೆಯದೆ ಅಂತರಾಜ್ಯ ಯೋಜನೆಗಳ ಜಾರಿಗೆ ತಂದಿದ್ದಾರೆ. ಇದರಲ್ಲಿ ಪೊಲಿಟಿಕಲ್ ವಿಲ್ ಎಷ್ಟು ಇದೆ ಎಂದು ಕೇಳುತ್ತಿದ್ದೇವೆ ಎಂದು ಸಂಶಯ ವ್ಯಕ್ತಪಡಿಸಿದರು.