ಧಾರವಾಡ: ಶ್ರೀರಂಗಪಟ್ಟಣದ ಆಂಜನೇಯನ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಅದು ಪ್ರಾಚ್ಯ ಇಲಾಖೆಯ ಕಟ್ಟಡ. ಅಲ್ಲಿ ಬೋರ್ಡ್ ಕೂಡಾ ಇದೆ. ಅಲ್ಲಿ ಆಂಜನೇಯ ದೇವಸ್ಥಾನ ಪ್ರತಿಷ್ಠಾಪನೆ ಮಾಡಬೇಕೆಂಬ ಒತ್ತಡ ಕೂಡಾ ಬಂದಿದೆ. ಅಲ್ಲಿ ನಡೆದಿರುವ ವಾದ ನೂರಕ್ಕೆ ನೂರು ಸತ್ಯ ಎಂದರು. ಇದನ್ನೂ ಓದಿ: ದಿವ್ಯಾಂಗರಿಗೆ ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ಸಾರ್ವಜನಿಕರ ಪಾತ್ರ ಮುಖ್ಯ: ರಾಜ್ಯಪಾಲ
Advertisement
Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ವಿಚಾರ ಮಂಚ್ ಹೋರಾಟ ಮಾಡುತ್ತಿದೆ. ಅದಕ್ಕೆ ನಾನು ಬೆಂಬಲ ಕೊಡುತ್ತೇನೆ. ಆಂಜನೇಯ ದೇವಾಲಯ ಪ್ರತಿಷ್ಠಾಪನೆಗೆ ಜಿಲ್ಲಾಧಿಕಾರಿ ಹಾಗೂ ಮುಸ್ಲಿಂ ಸಮಾಜ ಅವಕಾಶ ಮಾಡಿ ಕೊಡಬೇಕು. ಈ ವಿಚಾರದಲ್ಲಿ ಸಂಘರ್ಷ ಆಗದೇ ಸೌಹಾರ್ದ ಶಾಂತ ರೀತಿಯಲ್ಲಿ ಬಗೆಹರಿಸಬೇಕು ಎಂದು ವಿನಂತಿಸಿಕೊಂಡರು.
Advertisement
ಪಠ್ಯದಲ್ಲಿ ಹೆಡಗೆವಾರ್ ಸ್ವಾಗತಾರ್ಹ:
ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಹೆಡಗೆವಾರ್ ಇವರ ವಿಚಾರ ಧಾರೆ ಮುದ್ರಿಸಿದ್ದು ಸ್ವಾಗತಾರ್ಹ. ಇದು ವಿರೋಧಾತ್ಮಕ ಪ್ರಕ್ರಿಯೆ ಅಲ್ಲ, ಇದು ರಾಷ್ಟ್ರೀಯ ವಾದ. ದೇಶ ಭಕ್ತಿಯ ಹಿನ್ನೆಲೆಯಲ್ಲಿ ಆದ ಘಟನೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ಇದನ್ನು ವಿರೋಧ ಮಾಡುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಮೇ 19ಕ್ಕೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ
Advertisement
ಇಲ್ಲಿವರೆಗೆ ನಾಸ್ತಿಕವಾದ, ಅರಾಷ್ಟ್ರೀಯತೆ, ಮುಸ್ಲಿಂ ಗುಲಾಮಿ ರಾಜರ ವೈಭವಿಕರಣ ಪಠ್ಯ ಪುಸ್ತಕದಲ್ಲಿತ್ತು. ಟಿಪ್ಪು, ಔರಂಗಜೇಬ, ಅಕ್ಬರನ ಪಾಠ ಸಾಕು. ಈಗ ಹೆಡಗೆವಾರ್, ಭಗತಸಿಂಗ್, ಸಾವರಕರ್, ರಾಯಣ್ಣ, ಚನ್ನಮ್ಮರಂತವರ ಬಗ್ಗೆ ಹಾಕುತ್ತಿರುವದು ಒಳ್ಳೆಯ ವಿಚಾರ ಎಂದರು.