ಬೆಳಗಾವಿ(ಚಿಕ್ಕೋಡಿ): ಈ ಬಾರಿ ಉಂಟಾಗಿದ್ದ ಜಲ ರಾಕ್ಷಸ ಪ್ರವಾಹಕ್ಕೆ ಸಾವಿರಾರು ಮನೆಗಳು, ನೂರಾರು ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಆದರೆ ನದಿ ಮಧ್ಯದಲ್ಲೇ ಪ್ರತಿಷ್ಠಾಪಿಸರುವ ಆಂಜನೇಯನ ಮೂರ್ತಿಗೆ ರಾಕ್ಷಸ ಪ್ರವಾಹ ಕಿಂಚಿತ್ತು ಧಕ್ಕೆ ಮಾಡದೇ ಇರುವದು ಆಂಜನೇಯನ ಶಕ್ತಿಯ ಪವಾಡಕ್ಕೆ ಸಾಕ್ಷಿಯಾಗಿದೆ.
Advertisement
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನೊಗಿನಹಾಳ ಗ್ರಾಮದ ಹಿರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳ ಸಂಗಮ ಸ್ಥಳದಲ್ಲಿ ಈ ದೇಗುಲವಿದೆ. ನದಿ ಮಧ್ಯದಲ್ಲಿ ಪ್ರತಿಷ್ಠಾಪಿಸಿರುವ ಆಂಜನೇಯನ ಮೂರ್ತಿ ಪ್ರವಾಹಕ್ಕೆ ನಲುಗದೆ ಹಾಗೆ ನಿಂತಿರುವುದು ಅಚ್ಚರಿಗೆ ಕಾರಣವಾಗಿದೆ. ನದಿ ಪಕ್ಕದ 2 ಬೃಹತ್ ಸೇತುವೆಗಳು ಸೇರಿದಂತೆ ನೂರಾರು ಮನೆಗಳು ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಆದರೆ ಆಂಜನೇಯನಿಗೆ ಏನೂ ಆಗಿಲ್ಲ.
Advertisement
Advertisement
ಕೇವಲ 2 ಬ್ಯಾಗ್ ಸಿಮೆಂಟ ಬಳಿಸಿ ನಿಲ್ಲಿಸಿರುವ ಈ ಮೂರ್ತಿಗೆ ಮಾತ್ರ ಸ್ವಲ್ಪವೂ ಧಕ್ಕೆಯಾಗದೇ ನಿಂತ ಸ್ಥಳದಲ್ಲೇ ಹಾಗೆ ಇದೆ. ರಣ ಪ್ರವಾಹದಲ್ಲೂ ಆಂಜನೇಯನ ಮೂರ್ತಿ ನಿಂತಿರುವುದು ನಿಜಕ್ಕೂ ವಿಸ್ಮಯ, ಅಚ್ಚರಿ. ಭಕ್ತರೂ ಸಹ ಈ ಪವಾಡಕ್ಕೆ ನಿಬ್ಬೆರಗಾಗಿದ್ದಾರೆ.
Advertisement
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಪ್ರಾಕೃತಿಕ ವಿಕೋಪ, ನೆರೆ ಹಾವಳಿಗೆ ತುತ್ತಾಗಿ ಮನೆ, ಕೃಷಿಭೂಮಿ ನಾಶವಾಗಿ ಹೋಗಿತ್ತು. ಆದರೆ, ಇದರ ಮಧ್ಯೆ ಇದ್ದ ದೈವಸ್ಥಾನಗಳಿಗೆ ಯಾವುದೇ ಹಾನಿಯಾಗದೇ ಇರುವುದು ಅಚ್ಚರಿ ಮೂಡಿಸಿತ್ತು.
ಜಲ ಸ್ಫೋಟಕ್ಕೆ ಮನೆ, ಸುತ್ತಲ ಕೃಷಿ ಭೂಮಿ ಕೊಚ್ಚಿ ಹೋದರೂ, ತುಳುನಾಡಿನ ಕಾರಣಿಕ ಶಕ್ತಿಯ ಗುಡಿಗಳಿಗೆ ಕಿಂಚಿತ್ತೂ ಹಾನಿಯಾಗಿರಲಿಲ್ಲ. ಬೆಳ್ತಂಗಡಿ ತಾಲೂಕಿನ ದಿಡುಪೆ ಪ್ರದೇಶದಲ್ಲಿ ನೆರೆ ಹಾವಳಿಗೆ ಬೆಟ್ಟ ಕುಸಿದು ಬೃಹತ್ ಮರಗಳು ಛಿದ್ರ, ಛಿದ್ರವಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಮರಗಳ ದಿಮ್ಮಿಗಳ ಜೊತೆ ಬಂದ ನದಿಯ ಪ್ರವಾಹಕ್ಕೆ ತುತ್ತಾಗಿ ಸೇತುವೆ, ಆಸು-ಪಾಸಿನ ಮನೆ, ಕೃಷಿ ಭೂಮಿಯನ್ನೂ ಬಿಡದೆ ಸರ್ವನಾಶ ಮಾಡಿತ್ತು. ಆದರೆ ಅದೇ ಸ್ಥಳದಲ್ಲಿ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯಗಳಿದ್ದು, ಅವುಗಳು ಒಂದಿಂಚೂ ಧಕ್ಕೆಯಾಗದೆ ಉಳಿದಿತ್ತು. ಸ್ಥಳೀಯರಲ್ಲಿ ಈ ವಿದ್ಯಮಾನ ಆಶ್ಚರ್ಯ ತಂದಿದ್ದು, ದೈವೀ ಪವಾಡಕ್ಕೆ ಬೆರಗಾಗಿದ್ದರು.