ಕನ್ನಡ ಕಿರುತೆರೆಯಲ್ಲಿ ‘ಕೃಷ್ಣ ರುಕ್ಮಿಣಿ’ (Krishna Rukmini) ಸೀರಿಯಲ್ ಭಾರೀ ಮೆಚ್ಚುಗೆ ಗಳಿಸಿತ್ತು. ನಾಯಕಿಯಾಗಿ ರುಕ್ಮಿಣಿ ಪಾತ್ರಧಾರಿ ಕೂಡ ಸೈ ಎನಿಸಿಕೊಂಡಿದ್ದರು. ಹಲವು ವರ್ಷಗಳ ನಂತರ ರುಕ್ಮಿಣಿ ಪಾತ್ರಧಾರಿ ಅಂಜನಾ ಶ್ರೀನಿವಾಸ್ (Anjana Srinivas) ಕನ್ನಡ ಕಿರುತೆರೆಗೆ ಕಮ್‌ಬ್ಯಾಕ್ ಆಗಿದ್ದಾರೆ.
2011ರಲ್ಲಿ ‘ಕೃಷ್ಣ ರುಕ್ಮಿಣಿ’ ಸೀರಿಯಲ್ ಪ್ರಸಾರವಾಗುತ್ತಿತ್ತು. ಅದರಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಹೀರೋ ಆಗಿದ್ರೆ, ನಾಯಕಿಯಾಗಿ ಅಂಜನಾ ನಟಿಸಿದ್ದರು. ಕಿರುತೆರೆಯಲ್ಲಿ ಬೆಸ್ಟ್ ಜೋಡಿ ಎಂದೇ ಅಂದು ಫೇಮಸ್ ಆಗಿದ್ದರು. ಈ ಸೀರಿಯಲ್ ನಂತರ ಪರಭಾಷೆಯ ಸೀರಿಯಲ್‌ನಲ್ಲಿ ನಟಿ ಬ್ಯುಸಿಯಾಗಿದ್ದರು. ಈಗ ಮತ್ತೆ ಕನ್ನಡದ ‘ಜಾನಕಿ ಸಂಸಾರ’ ಕಥೆ ಹೇಳೋದಕ್ಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಗಳ ಹೆಸರು ಬದಲಿಸಿದ ದುನಿಯಾ ವಿಜಯ್
‘ಜಾನಕಿ ಸಂಸಾರ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ವಾಹಿನಿಯು ಸುಂದರವಾದ ಪ್ರೋಮೋ ರಿಲೀಸ್ ಮಾಡಿ ಮಾಹಿತಿ ನೀಡಿದೆ. ಕೂಡು ಕುಟುಂಬದ ಕಥೆ ಈ ಧಾರಾವಾಹಿಯಲ್ಲಿದೆ. ಅಂಜನಾ ಅವರು ಜಾನಕಿ ಪಾತ್ರ ಮಾಡುತ್ತಿದ್ದು, ಜಾನಕಿಗೆ ಮಗು ಕೂಡ ಇದೆ. ಸೂರಜ್ ಹೊಳ್ಳ ಅವರು ಈ ಧಾರಾವಾಹಿಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, 17ನೇ ವಯಸ್ಸಿಗೆ ಕೃಷ್ಣ ರುಕ್ಮಿಣಿ ಸೀರಿಯಲ್‌ಗೆ ನಾಯಕಿಯಾಗಿ ಆಯ್ಕೆ ಆದರು. ಬಳಿಕ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ 7 ಸೀರಿಯಲ್‌ನಲ್ಲಿ ನಟಿಸಿದ್ದಾರೆ.