ಬೆಳಗಾವಿ: ಖಾನಾಪೂರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಲ್ಯಾಬ್ ಕಾಮಗಾರಿಗೆ ಪೂಜೆ ಸಲ್ಲಿಸಿ ಕಾಂಕ್ರೀಟ್ ಹಾಕುವ ಮೂಲಕ ಶಾಸಕಿ ಅಂಜಲಿ ನಿಂಬಾಳ್ಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾನಾಪೂರ ತಾಲೂಕಿಗೆ ಹೆಮ್ಮೆಯ ವಿಷಯವಾದ ಈ ಎಂಸಿಎಚ್ ಆಸ್ಪತ್ರೆಯ ಕೆಲಸ ಚಾಲನೆ ಇದೆ. 15 ಕೋಟಿ ರೂ. ವೆಚ್ಚದಲ್ಲಿ 60 ಬೆಡ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈ ಕೆಲಸದ ಸ್ಲ್ಯಾಬ್ ಹಾಕುವ ಕಾರ್ಯಕ್ರಮದ ಪೂಜೆ ನೇರವಿರಿಸಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಆಶೀರ್ವಾದಬೇಕು. ಏಕೆಂದರೆ ಇದು ತಾಲೂಕಿಗೆ ಹೆಮ್ಮೆಯ ವಿಷಯ ದೊಡ್ಡ ಆಸ್ಪತ್ರೆ ನಾನು ಒಬ್ಬ ಸ್ತ್ರೀ ವೈದ್ಯೆಯಾಗಿರುವುದರಿಂದ ನನಗೂ ಹೆಮ್ಮೆಯ ವಿಷಯ ಎಂದಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್ ಹೌಸ್ ಫುಲ್- ಸರ್ಕಾರದಿಂದ ಅನುಮತಿ
Advertisement
Advertisement
ಖಾನಾಪೂರ ತಾಲೂಕಿನಲ್ಲಿ ಬಡಜನರಿದ್ದಾರೆ. ಅವರಿಗೆ ಬೆಳಗಾವಿಗೆ ಹೋಗಿ ಹೆರಿಗೆ ಮಾಡಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಇದನ್ನು ಗಮನಿಸಿ ಈ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ವೈದ್ಯೆಯಾಗಿರುವ ನನಗೆ ಜನ ಶಾಸಕಿ ಮಾಡಿ ಆಶಿರ್ವಾದ ನೀಡಿದ್ದಾರೆ. ಅವರು ನೀಡಿದ ಆಶಿರ್ವಾದಕ್ಕೆ ಚಿರಋಣಿ. ಇನ್ನು ಸ್ವಲ್ಪ ತಿಂಗಳಿನಲ್ಲಿ ಇದನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು. ಈ ಮೂಲಕ ತಾಯಿ ಮತ್ತು ಮಕ್ಕಳ ಆರೈಕೆಗೆ ಹೆಚ್ಚಿನ ಒತ್ತು ನೀಡುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ