ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಮ್ಮ ಪತಿ ಕುಮಾರಸ್ವಾಮಿ ಮೇಲೆ ದ್ವೇಷ ಸಾಧಿಸಿದ್ರು ಎಂದು ಬಜೆಟ್ ಬಗ್ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿದರು.
ಮಾಧ್ಯಮಗಳ ಜೊತೆ ಜೊತೆ ಮಾತನಾಡಿತ ಅನಿತಾ ಕುಮಾರಸ್ವಾಮಿ, ಇದೊಂದು ನಿರಾಸೆಯ ಬಜೆಟ್ ಆಗಿದೆ. ಯಾವುದೇ ವರ್ಗದವರಿಗೂ ಅನುಕೂಲ ಆಗುವ ಲಕ್ಷಣಗಳ ಕಾಣುತ್ತಿಲ್ಲ. ಯಡಿಯೂರಪ್ಪ ಹಸಿರು ಶಾಲು ಹಾಕೊಂಡು ಬಂದಾಗ ರೈತನಿಗೆ ಬಜೆಟ್‍ನಲ್ಲಿ ಏನೋ ಇರುಬೇಕು ಅಂದುಕೊಂಡಿದ್ವಿ. ಆದರೆ ಮಹಿಳೆಯರಿಗೆ, ರೈತರಿಗೆ, ಕೊನೆಗೆ ಯುವಕರಿಗೂ ಇಲ್ಲ. ಒಟ್ಟಿನಲ್ಲಿ ಯಾವುದೇ ಒಂದು ವರ್ಗದವರಿಗೂ ಅನುಕೂಲ ಇಲ್ಲ ಎಂದರು.
Advertisement
Advertisement
ಮೈತ್ರಿ ಸರ್ಕಾರದಲ್ಲಿ ಘೋಷಿಸಿದ್ದ ಬಡವರ ಬಂಧು, ಸಾಲಮನ್ನಾದ ವಿಚಾರ ಬಜೆಟ್‍ನಲ್ಲಿ ಪ್ರಸ್ತಾಪವೇ ಮಾಡಿಲ್ಲ. ಇದನ್ನು ಬಿಜೆಪಿ ಕೈಬಿಡುತ್ತಿದೆ. ಸಿಎಂ ಯಡಿಯೂರಪ್ಪ ಕುಮಾರಸ್ವಾಮಿ ಮೇಲೆ ವೈಯಕ್ತಿಕ ದ್ವೇಷಕ್ಕೆ ಹಿಂಗೆಲ್ಲ ಮಾಡಿದರು. ಆದರೆ ರೈತರಿಗೋಸ್ಕರ ಸಾಲಮನ್ನಾ ಯೋಜನೆಯನ್ನು ಜಾರಿಗೆ ಮಾಡಲಾಗಿತ್ತು. ಹೀಗಾಗಿ ಅದನ್ನಾದರೂ ಮುಂದುವರಿಸಿಕೊಂಡು ಹೋಗಬೇಕಿತ್ತು ಎಂಬುದು ನಮ್ಮ ಅಭಿಪ್ರಾಯ ಎಂದು ಅನಿತಾ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
Advertisement
ಈ ಬಾರಿಯ ಬಜೆಟ್‍ನಲ್ಲಿ ನನೆಗೆ ಯಾವುದೇ ಗುಡ್ ಅನಿಸುವ ಯಾವ ಅಂಶವೂ ಇಲ್ಲ. ಇದೊಂದು ನೀರಸ ಬಜೆಟ್ ಎಂದು ಸಿಎಂ ಯಡಿಯೂರಪ್ಪ ಅವರು ಮಂಡಿಸಿದ್ದ ಬಜೆಟ್ ಬಗ್ಗೆ ಅನಿತಾ ಕುಮಾರಸ್ವಾಮಿ ಕಿಡಿಕಾರಿದರು.