ಖ್ಯಾತ ಜ್ಯೋತಿಷಿಗಳಿಂದ ಸಲಹೆ ಪಡೆದ ಅನಿತಾ ಕುಮಾರಸ್ವಾಮಿ

Public TV
1 Min Read
hdk anita kumaraswamy 5

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಸಿಗುತ್ತಿದ್ದು, ಸಮ್ಮಿಶ್ರ ಸರ್ಕಾರ ಉಳಿಯುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಗಾಣಗಾಪುರ ದತ್ತಾತ್ರೇಯ ದೇವರ ಮೊರೆ ಹೋದ್ರೆ, ಇತ್ತ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಖ್ಯಾತ ಜ್ಯೋತಿಷಿಗಳಿಂದ ಸಲಹೆ ಪಡೆದುಕೊಂಡಿದ್ದಾರೆ.

ಹೌದು, ಸಮ್ಮಿಶ್ರ ಸರ್ಕಾರ ಉಳಿಯುತ್ತಾ ಎಂಬುದರ ಬಗ್ಗೆ ಅನಿತಾ ಕುಮಾರಸ್ವಾಮಿ ತಲೆಕಡಿಸಿಕೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸೋಮವಾರ ಖ್ಯಾತ ಜ್ಯೋತಿಷಿಗಳಾದ ವಿದ್ವಾನ್ ಕಮಲಾಕರ್ ಭಟ್ ಗುರುಗಳಿಂದ ರಾಜಕೀಯ ಬೆಳವಣಿಗೆಯ ಬಗ್ಗೆ ಸಲಹೆಗಳನ್ನು ಪಡೆದುಕೊಂಡಿದ್ದಾರಂತೆ. ಸೋಮವಾರ ಮಧ್ಯಾಹ್ನ ಸಿಎಂ ಅವರ ಜೆಪಿ ನಗರ ನಿವಾಸಕ್ಕೆ ಕಮಲಾಕರ್ ಭಟ್ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಸಮಾಲೋಚನೆ ನಡೆಸಿದ್ದಾರೆ. ಇದನ್ನೂ ಓದಿ: ಗಾಣಗಾಪುರಕ್ಕೆ ಸಿಎಂ ಎಚ್‍ಡಿಕೆ, ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು? – ಇಲ್ಲಿದೆ ಇನ್‍ಸೈಡ್ ಸ್ಟೋರಿ

KAMALAKARA BBHAT

ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆ ಸರಿ ಹೋಗತ್ತಾ..? ಸರ್ಕಾರದ ಐದು ವರ್ಷ ಪೂರೈಸುತ್ತಾ..? ಸದ್ಯ ಉದ್ಭವವಾಗಿರುವ ಪರಿಸ್ಥಿತಿ ಬಗೆಹರಿಯುತ್ತಾ..? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನ ಕಂಡುಕೊಂಡಿದ್ದು, ಈ ಮೈತ್ರಿ ಸರ್ಕಾರದ ಉಳಿವಿಗೆ ಏನು ಮಾಡಬೇಕು ಎಂಬ ಸಲಹೆಯನ್ನೂ ಸಹ ಅನಿತಾ ಕುಮಾರಸ್ವಾಮಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ದ್ವಾರಕನಾಥ ಗುರೂಜಿ ಸಲಹೆಯ ಮೇರೆಗೆ ಕಲಬುರಗಿ ಸಮೀಪ ಗಾಣಗಾಪುರದ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *