ಭಾರತದಲ್ಲೇ ಮೊದಲ ಬಾರಿಗೆ ಅನಿರುದ್ಧ್ ಹುಕುಂ ಟೂರ್

Public TV
1 Min Read
Anirudh Ravichander 2

ಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ (Anirudh Ravichander) ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ. ಇದನ್ನೂ ಓದಿ:ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

Anirudh Ravichander

ದುಬೈ, ಆಸ್ಟ್ರೇಲಿಯಾ, ಅಮೆರಿಕ, ಪ್ಯಾರಿಸ್, ಸ್ವಿಜರ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮ್ಯೂಸಿಕ್‌ ಕಾನ್ಸರ್ಟ್‌ ಮಾಡುತ್ತಾ ಬಂದಿದ್ದಾರೆ. ಈಗ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ. ಅದು ಕೂಡ ನಮ್ಮ ಬೆಂಗಳೂರಿಗೆ ಅನ್ನೋದು ವಿಶೇಷ. ಅನಿರುದ್ಧ್ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮ್ಯೂಸಿಕ್ ಜಾತ್ರೆ ಮಾಡಲು ರೆಡಿಯಾಗಿದ್ದಾರೆ. ಮೇ 31ರಂದು ಟೆರಾಫಾರ್ಮ್ ಅರೇನಾದಲ್ಲಿ ನಡೆಯುವ ಮ್ಯೂಸಿಕ್ ಕಾನ್ಸರ್ಟ್ ಈಗಾಗಲೇ ಬೃಹತ್ ದಾಖಲೆ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ:ಇಸ್ರೇಲ್‌ನಿಂದ ರಕ್ಷಿಸಿದ್ದಕ್ಕೆ ಪಿಎಂಗೆ ಥ್ಯಾಂಕ್ಯೂ ಎಂದ ನಟಿ ನುಶ್ರತ್ ಭರೂಚಾ

Anirudh Ravichander 1

ಬೆಂಗಳೂರಿನಲ್ಲಿ ನಡೆಯಲಿರುವ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಾನ್ಸರ್ಟ್ ಅನ್ನು ಕೆವಿಎನ್ ಸಂಸ್ಥೆ ಪ್ರಸ್ತುಪಡಿಸಿದೆ. ವಿಶೇಷ ಅಂದರೆ, ಅನಿರುದ್ಧ್ ಅವರ ಹುಕುಂ ಟೂರ್ ಬೆಂಗಳೂರು ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಕೇವಲ 60 ನಿಮಿಷದಲ್ಲೇ ಮಾರಾಟವಾಗಿದೆ ಅಂತ ಕೆವಿಎನ್ ಸಂಸ್ಥೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಖಚಿತಪಡಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಜೆಗೆ ಕಾದಿದ್ದ ಸಿಲಿಕಾನ್ ಸಿಟಿಯ ಮಂದಿ, ವೇಗವಾಗಿ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಅನಿರುದ್ಧ್‌ ಮ್ಯೂಸಿಕ್ ಕೇಳಲು ಸಿಲಿಕಾನ್ ಸಿಟಿ ಮಂದಿ ಯಾವ ರೀತಿ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿದೆ.

anirudh ravichander 2

ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಸರ್ಪ್ರೈಸ್‌ಗಳು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆಗಳಿವೆ. ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಸೋಷಿಯಲ್ ಮೀಡಿಯಾ ಖಾತೆಯಿಂದ ಸಿಗಲಿದೆ.

Share This Article